RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ರಾಜಋಷಿ ಶ್ರೀ ಭಗೀರಥ ಮಹಾರಾಜರ ಜಯಂತಿ, ತಾಯಿ ಹೆಮರೆಡ್ಡಿ ಮಲ್ಲಮ್ಮ ಮತ್ತು ಶ್ರೀ ಶಂಕರಾಚಾರ್ಯ ಜಯಂತಿ ವಿಜಂಭ್ರಣೆಯಿಂದ ಆಚರಣೆ : ತಹಶೀಲ್ದಾರ್ ಪ್ರಕಾಶ

ಗೋಕಾಕ:ರಾಜಋಷಿ ಶ್ರೀ ಭಗೀರಥ ಮಹಾರಾಜರ ಜಯಂತಿ, ತಾಯಿ ಹೆಮರೆಡ್ಡಿ ಮಲ್ಲಮ್ಮ ಮತ್ತು ಶ್ರೀ ಶಂಕರಾಚಾರ್ಯ ಜಯಂತಿ ವಿಜಂಭ್ರಣೆಯಿಂದ ಆಚರಣೆ : ತಹಶೀಲ್ದಾರ್ ಪ್ರಕಾಶ 

ರಾಜಋಷಿ ಶ್ರೀ ಭಗೀರಥ ಮಹಾರಾಜರ ಜಯಂತಿ, ತಾಯಿ ಹೆಮರೆಡ್ಡಿ ಮಲ್ಲಮ್ಮ ಮತ್ತು ಶ್ರೀ ಶಂಕರಾಚಾರ್ಯ ಜಯಂತಿ ವಿಜಂಭ್ರಣೆಯಿಂದ ಆಚರಣೆ : ತಹಶೀಲ್ದಾರ್ ಪ್ರಕಾಶ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 28 :

 
ಕೊರೋನಾ ಮತ್ತು ಪ್ರವಾಹದ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಎಲ್ಲ ಮಹನೀಯರ ಜಯಂತಿ ಉತ್ಸವಗಳನ್ನು ಸರಕಾರ ಆದೇಶದ ಮೇರೆಗೆ ಸರಳವಾಗಿ ಆಚರಿಸಲಾಗುತ್ತಿತು. ಈ ಬಾರಿ ಎಲ್ಲ ಜಯಂತಿಗಳನ್ನು ಅತಿ ಉತ್ಸಾಹದಿಂದ ಆಚರಿಸಲು ಅನುಕೂಲವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ಅವರು, ರಾಜಋಷಿ ಶ್ರೀ ಭಗೀರಥ ಮಹಾರಾಜರ ಜಯಂತಿ, ತಾಯಿ ಹೆಮರೆಡ್ಡಿ ಮಲ್ಲಮ್ಮ ಜಯಂತಿ ಮತ್ತು ಶ್ರೀ ಶಂಕರಾಚಾರ್ಯ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಭಗೀರಥರ ಹಾಗೂ ಹೆಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ತಾಲೂಕಾಡಳಿತದಿಂದ ಕಚೇರಿಗಳಲ್ಲಿ ಬೆಳಿಗ್ಗೆ 9ಗಂಟೆಗೆ ಆಚರಣೆ ಮಾಡಲಾಗುವದು. ನಂತರ ಸಮಾಜ ಬಾಂಧವರು ಏರ್ಪಡಿಸಿದ ಜಯಂತಿ ಆಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಗುವದು. ಸರಕಾರದಿಂದ ಜಯಂತಿ ಆಚರಣೆಗೆ ಬರುವ ಅನುದಾನದಲ್ಲಿ ಅಚ್ಚುಕಟ್ಟಾಗಿ ನಡೆಸಲಾಗುವದು ಎಂದರು.
ಉಪ್ಪಾರ ಸಮಾಜದ ಮುಖಂಡ ಹಾಗೂ ಹಿರಿಯ ನ್ಯಾಯವಾದಿ ಎಸ್ ಎಮ್ ಹತ್ತಿಕಟಗಿ ಮಾತನಾಡಿ, ಮೇ ದಿ.8 ಶ್ರೀ ಭಗೀರಥ ಜಯಂತಿಯಂದು ಬೆಳಿಗ್ಗೆ 9.15 ಗಂಟೆಗೆ ಉಪ್ಪಾರ ಓಣಿಯ ರೇಣುಕಾ ಯಲ್ಲಮ್ಮ ದೇವಸ್ಥಾನದಿಂದ ನಗರದ ವಿವಿಧ ಬೀದಿಗಳಲ್ಲಿ ರಾಜಋಷಿ ಶ್ರೀ ಭಗೀರಥ ಮಹಾರಾಜರ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದ್ದು, ಉಪ್ಪಾರ ಸಮಾಜದ ಕುಲ ಬಾಂಧವರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭವ್ಯ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ರೆಡ್ಡಿ ಸಮಾಜದ ಮುಖಂಡ ಶಿವನಗೌಡ ಪಾಟೀಲ ಮಾತನಾಡಿ, ರೆಡ್ಡಿ ಸಮುದಾಯದಲ್ಲಿ ಪ್ರತಿವರ್ಷ ಎರಡು ಜಯಂತಿ ಆಚರಣೆಗಳಿದ್ದು, ಹೆಮರೆಡ್ಡಿ ಮಲ್ಲಮ್ಮನ ಜಯಂತಿ ಆಚರಣೆ ಈ ಬಾರಿ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಭವ್ಯ ಮೆರವಣಿಗೆ ಮೂಲಕ ಆಚರಣೆ ಮಾಡಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೆಡ್ಡಿ ಸಮಾಜದ ಮುಖಂಡ ಹಾಗೂ ಟಿಎಪಿಸಿಎಮ್‍ಎಸ್ ಅಧ್ಯಕ್ಷ ಅಶೋಕ ನಾಯಿಕ, ಉಪ್ಪಾರ ಸಮುದಾಯದ ಮುಖಂಡರುಗಳಾದ ಎಲ್ ಎನ್ ಬೂದಿಗೊಪ್ಪ, ಕುಶಾಲ ಗುಡೆನ್ನವರ, ಅಡಿವೆಪ್ಪ ಕಿತ್ತೂರ, ಭೀಮಶಿ ಭರಮನ್ನವರ, ಭಗವಂತ ಹುಳ್ಳಿ, ಬಸವರಾಜ ಖಾನಪ್ಪನವರ, ಮಾಯಪ್ಪ ತಹಶೀಲ್ದಾರ, ದೇವೆಂದ್ರ ಲಾತೂರ, ಯಲ್ಲಪ್ಪ ಸುಳ್ಳನವರ, ಯಲ್ಲಪ್ಪ ಹೆಜ್ಜೆಗಾರ, ಸದಾಶಿವ ಗುದಗಗೋಳ, ವಾಯ್ ಕೆ ಕೌಜಲಗಿ, ನಾಗರಾಜ ತಹಶೀಲ್ದಾರ, ಭಟ್ಟಿ ವಕೀಲರು, ಬಸವರಾಜ ಮರೆಪ್ಪಗೋಳ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಉಪತಹಶೀಲ್ದಾರ ವಾಯ್ ಎಲ್ ಡಬ್ಬನವರ ಸೇರಿದಂತೆ ಅನೇಕರು ಇದ್ದರು.

Related posts: