RNI NO. KARKAN/2006/27779|Sunday, February 1, 2026
You are here: Home » breaking news » ಗೋಕಾಕ:ಕುಸ್ತಿ ಕ್ರೀಡಾಪಟುಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಸನ್ಮಾನ

ಗೋಕಾಕ:ಕುಸ್ತಿ ಕ್ರೀಡಾಪಟುಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಸನ್ಮಾನ 

ಕುಸ್ತಿ ಕ್ರೀಡಾಪಟುಗಳಿಗೆ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಸನ್ಮಾನ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 2 :

 
ಬಂಗಾರದ ಪದಕ ವಿಜೇತ ಇಬ್ಬರು ಕುಸ್ತಿ ಕ್ರೀಡಾಪಟುಗಳನ್ನು ಶಾಸಕ ರಮೇಶ ಜಾರಕಿಹೊಳಿ ಬುಧವಾರದಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಸತ್ಕರಿಸಿದರು.

ತಾಲೂಕಿನ ಕೈತನಾಳ ಹೊಸೂರು ಗ್ರಾಮದ ಕುಸ್ತಿಪಟುಗಳು ಗೋವಾ ರಾಜ್ಯದ ವಡಗಾಂವದಲ್ಲಿ ನಡೆದ ರಾಷ್ಟ ಮಟ್ಟದ ಯೂಥ್ ಒಲಂಪಿಕ್ ರೂರಲ್ ಗೇಮ್ಸ್ ಚಾಂಪಿಯನ ಶಿಪ್ 2021-22 ರಲ್ಲಿ 61 ಕೆ.ಜಿ ಕುಸ್ತಿ ವಿಭಾಗದಲ್ಲಿ ಪ್ರವೀಣ ಬಡಕುರಿ ಮತ್ತು 41 ಕೆ.ಜಿ ಕುಸ್ತಿ ವಿಭಾಗದಲ್ಲಿ ಶ್ರೀಧರ ಬಡಕುರಿ ಬಂಗಾರದ ಪದಕ ಪಡೆದು ವಿಜಯಶಾಲಿಗಳಾಗಿದ್ದು, ಶಾಸಕ ರಮೇಶ ಜಾರಕಿಹೊಳಿ ಅವರು ವಿಜೇತ ಗ್ರಾಮೀಣ ಕ್ರೀಡಾಪಟುಗಳಿಗೆ ಸನ್ಮಾನಿಸಿ ಶುಭ ಹಾರೈಸಿದರು.

Related posts: