ಖಾನಾಪುರ:ಹೊಸಲಿಂಗನಮಠ ಗ್ರಾಮದಲ್ಲಿ “ನಮ್ಮ ಊರು-ನಮ್ಮ ಶ್ರದ್ಧಾ ಕೇಂದ್ರ” ಕಾರ್ಯಕ್ರಮ
ಹೊಸಲಿಂಗನಮಠ ಗ್ರಾಮದಲ್ಲಿ “ನಮ್ಮ ಊರು-ನಮ್ಮ ಶ್ರದ್ಧಾ ಕೇಂದ್ರ” ಕಾರ್ಯಕ್ರಮ
ಧರ್ಮ ಒಂದೇ, ಅದುವೇ ಮಾನವ ಧರ್ಮ ಜೀವನದಲ್ಲಿ ನಮಗೆ ಬೇಕಾಗಿ ನಾವೂಗಳು ಜಾತಿಗಳ ವಿಂಗಡಣೆ ಮಾಡಿಕೊಂಡಿದ್ದೆವೆ.
ಇಂತಹ ಮಾತು ಕೇಳಿ ಬಂದಿರುವುದು ಬೇರೆಲ್ಲೂ ಅಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹೊಸಲಿಂಗನಮಠ ಗ್ರಾಮದಲ್ಲಿ ಹಮ್ಮಿಕೊಂಡಂತಹ “ನಮ್ಮ ಊರು-ನಮ್ಮ ಶ್ರದ್ಧಾ ಕೇಂದ್ರ” ಕಾರ್ಯಕ್ರಮದಲ್ಲಿ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಾಲ ಕೊಟ್ಟು ಆರ್ಥಿಕ ಸ್ವಾವಲಂಭಿಗಳಾಗಿ ಮಾಡುವುದು ಅಷ್ಟೇ ಅಲ್ಲದೇ ಸಾಮಾಜಿಕ ಕಾರ್ಯಗಳನ್ನು ಮಾಡಿ ಉತ್ತಮ ಸಮಾಜ ನಿರ್ಮಿಸುವುವಲ್ಲಿ ಪ್ರಮುಖ ಪಾತ್ರವಹಿಸಿಸುತ್ತಿದೆ.
ಹೀಗೆ ಇಂದು ಗುರುವಾರದಂದು ಹೊಸಲಿಂಗನಮಠ ಗ್ರಾಮದ ಮುಸ್ಲಿಂ ಸಮಾಜದ ಮಸೀದಿ ಎದುರುಗಡೆ ಸಂಘದ ಸರ್ವ ಧರ್ಮದ ಮಹಿಳಾ ಸದಸ್ಯರೆಲ್ಲರೂ ಕೂಡಿಕೊಂಡು ಸ್ವಚ್ಚತಾ ಕಾರ್ಯ ಮಾಡುವುದರ ಮುಖಾಂತರ ಧರ್ಮ ಒಂದೇ, ಅದುವೇ ಮಾನವ ಧರ್ಮ ಎಂಬುದನ್ನು ಸಾಬೀಪಡಿಸಿದರು.
ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಬೀಡಿ ವಿಭಾಗದ ಸೂಪರವೈಸರ ನಾಗರಾಜ, ಸಂಘದ ಒಕ್ಕೂಟ ಅಧ್ಯಕ್ಷೆ ಅಮೀನಾ ಹಟ್ಟಿಹೊಳಿ, ಉಪಾಧ್ಯಕ್ಷೆ ದೀಪಾ ಹರಿಜನ, ಸಂಘದ ಸೇವಾಪ್ರತಿನಿಧಿ ನಾಗರತ್ನಾ ಹಾಗೂ ಸರ್ವ ಸಂಘಗಳ ಸದಸ್ಯರು ಹಾಜರಿದ್ದರು.
ವರದಿಗಾರ:
ಕಾಶೀಮ ಹಟ್ಟಿಹೊಳಿ, ಖಾನಾಪುರ