RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಮತ್ತು ಬಿಜೆಪಿ ಅಭ್ಯರ್ಥಿ ಕವಟಗಿಮಠ ಅವರಿಗೆ ಬೆಂಬಲಿಸಿ : ಅಂಬಿರಾವ ಪಾಟೀಲ

ಗೋಕಾಕ:ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಮತ್ತು ಬಿಜೆಪಿ ಅಭ್ಯರ್ಥಿ ಕವಟಗಿಮಠ ಅವರಿಗೆ ಬೆಂಬಲಿಸಿ : ಅಂಬಿರಾವ ಪಾಟೀಲ 

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಮತ್ತು ಬಿಜೆಪಿ ಅಭ್ಯರ್ಥಿ ಕವಟಗಿಮಠ ಅವರಿಗೆ ಬೆಂಬಲಿಸಿ : ಅಂಬಿರಾವ ಪಾಟೀಲ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 5 :

 

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಮತ್ತು ಬಿಜೆಪಿ ಅಭ್ಯರ್ಥಿ ಕವಟಗಿಮಠ ಅವರಿಗೆ ಬೆಂಬಲಿಸುವಂತೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ವಿನಂತಿದರು.

ರವಿವಾರದಂದು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ಭೇಟಿಯಾಗಿ ಮತಯಾಚನೆ ಮಾಡಿ ಮಾತನಾಡಿದರು.
ಈ ಬಾರಿಯ ಪ್ರತಿಷ್ಠಿತ ಚುನಾವಣೆಯಲ್ಲಿ ಮತದಾರರ ಬಂಧುಗಳು ಯಾವುದೇ ಆಸೆ, ಆಮಿಷ್ಯಕ್ಕೆ ಒಳಗಾಗದೆ. ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಲಖನ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಹೆಚ್ಚಿನ ಅಭಿವೃದ್ಧಿಗೆ ಸಹಕರಿಸಿ , ಶಾಸಕ ರಮೇಶ ಜಾರಕಿಹೊಳಿ ಅವರ ಕೈ ಬಲ ಪಡಿಸಿ ಎಂದರು.
ಶಾಸಕ ರಮೇಶ ಜಾರಕಿಹೊಳಿ ಅವರನ್ನು ಕ್ಷೇತ್ರದ ಜನತೆ ಸದಾ ಆರ್ಶಿವದಿಸುತ್ತಾ ಬಂದಿದ್ದಿರಿ ಈ ಬಾರಿಯ ಚುನಾವಣೆಯು ಅತಿ ಮುಖ್ಯವಾಗಿದ್ದು, ನಾವು ಸೂಚಿಸಿರುವ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ತವಗ, ಮದವಾಲ,ಸುಲದಾಳ, ಗುಜನಾಳ, ಕುಂದರಗಿ, ಬೆಣಚಿಣಮರಡಿ (ಉ) , ಮೇಲ್ಮಟ್ಟಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿಯಾಗಿ ಮತ ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಭೀಮಗೌಡ ಪಾಟೀಲ, ರಾಮಣ್ಣ ಸಿಂಬ್ಲಿ, ರುದ್ರಪ್ಪ ನಾಯಿಕ , ಅಡಿವೆಪ್ಪ ನಾವಲಗಟ್ಟಿ, ಬಾಳಪ್ಪ ಕಣವ್ವನ ಪೂಜೇರಿ, ಬಿರಪ್ಪ ಪೂಜೇರಿ ,ಮುನ್ನಾ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಸುನಂದಾ ಜೆನಕಟ್ಟಿ, ಆನಂದ ಬಾರಿಮನಿ, ಸುಶೀಲಾ ಕೆಂಪಣ್ಣವರ, ರಾಜೇಶ್ರಿ ಬಡೆವಗೋಳ, ಎನ್.ಬಿ.ಪಾಟೀಲ, ಮಹಾನಿಂಗವ್ವ ಮಲ್ಲೋಡಿ, ಉಪಾಧ್ಯಕ್ಷರುಗಳಾದ ಮಹಾದೇವಿ ಕಳ್ಳಿಗುದ್ದಿ, ಕಸ್ತೂರಿ ಬಾದರವಾಡಿ, ಗಣಪತಿ ಮರಾಠೆ, ಮಲವ್ವ ಪುಡಭಂಗಿ, ಪ್ರೇಮಾ ಸನದಿ, ಶಂಕರ ಕುರಬೇಟ್ ಹಾಗೂ ಸದಸ್ಯರು ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: