RNI NO. KARKAN/2006/27779|Thursday, October 16, 2025
You are here: Home » breaking news » ಬೆಳಗಾವಿ:ಸೊಸೈಟಿಗಳಿಂದ ಆಗುತ್ತಿರುವ ತೊಂದರೆ ಖಂಡಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮನವಿ

ಬೆಳಗಾವಿ:ಸೊಸೈಟಿಗಳಿಂದ ಆಗುತ್ತಿರುವ ತೊಂದರೆ ಖಂಡಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮನವಿ 

ಸೊಸೈಟಿಗಳಿಂದ ಆಗುತ್ತಿರುವ ತೊಂದರೆ ಖಂಡಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮನವಿ

 
ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜು 7 :

ಮುತ್ತೂಟ್ ಫಾಯಿನಾನ್ಸ ಲಿಮಿಟೆಡ್ ಹಾಗೂ ಇತರೆ ಸಂಘ , ಸಂಸ್ಥೆ, ಸೊಸೈಟಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಆಗ್ರಹಿಸಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ( ಅಂಬೇಡ್ಕರ್) ಬೆಳಗಾವಿ ಘಟಕರದ ಕಾರ್ಯಕರ್ತರು ಬುಧವಾರದಂದು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು .

ಈಗಷ್ಟೇ ಕೊರೋನಾ 2ನೇ ಅಲೆಯಿಂದ ಜನರು ಚೇತರಿಸಿಕೊಳ್ಳತ್ತಿರುವ ಸಮಯದಲ್ಲಿ ಮುತ್ತೂಟ್ ಫಾಯಿನಾನ್ಸ ಹಾಗೂ ಇತರ ಸೋಸಾಯಿಟಿಯವರು ಸಾರ್ವಜನಿಕರಿಗೆ ಬಂಗಾರ ಸಾಲ ಹಾಗೂ ಇತರೆ ಸಾಲದ ಹಣವನ್ನು ಪಾವತಿಸುವಂತೆ ಕಿರುಕುಳ ಕೊಡುತ್ತಿದ್ದಾರೆ. ಬರುವ 6 ತಿಂಗಳ ವರೆಗೆ ಸಾರ್ವಜನಿಕರಿಗೆ ಯಾವುದೇ ಫಾಯಿನಾನ್ಸ ಹಾಗೂ ಸೋಸಾಯಿಟಿಯವರು ಕಿರುಕುಳ ನೀಡಬಾರದು ಎಂದು ಸರಕಾರ ಆದೇಶಿಸಿದರು ಸಹ ಸೊಸೈಟಿ ಹಾಗೂ ಫಾಯಿನಾನ್ಸ ನವರ ಸಾಲಗಾರರಿಗೆ ತೊಂದರೆಯನ್ನು ನೀಡುತ್ತಿದ್ದಾರೆ ಕಾರಣ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಜಿಲ್ಲೆಯ ಎಲ್ಲಾ ಫಾಯಿನಾನ್ಸ ಹಾಗೂ ಸೊಸೈಟಿಯವರಿಗೆ ಸಾಲಗಾರರಿಗೆ ಬಾಕಿ ತುಂಬಲು 6 ತಿಂಗಳ ಅವಧಿಯನ್ನು ವಿಸ್ತರಿಸಿ ಕೊಡಬೇಕೆಂದು ರಿಪಬ್ಲಿಕನ್ ಫಾರ್ಟಿ ಆಫ್ ಇಂಡಿಯಾ ( ಅಂಬೇಡ್ಕರ್) ವತಿಯಿಂದ ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸುಲೇಮಾನ ಜಮಾದಾರ, ಪದಾಧಿಕಾರಿಗಳಾದ ಅಜರ ಮುಜಾವರ, ತಬರೇಜ ಶೇಖ, ಆಸೀಫ್ ಪಾಶ್ಚಾಪೂರ, ಹಾಸಿಂಖಾನ ತೇರದಾಳ, ಮಹೇಶ ಶಿಗಿಹಳ್ಳಿ, ರಜದ ಹಟ್ಟಿಹೋಳಿ, ರೇಖಾ ಕವಡಿ ಸೇರಿದಂತೆ ಅನೇಕರು ಇದ್ಧರು.

 

Related posts: