RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಸೈಕಲ್ ಜಾಥಾ

ಗೋಕಾಕ:ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಸೈಕಲ್ ಜಾಥಾ 

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಸೈಕಲ್ ಜಾಥಾ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 7 :

 

ಕೇಂದ್ರ, ರಾಜ್ಯ ಸರ್ಕಾರದ ವೈಪಲ್ಯ ಹಾಗೂ ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಬುಧವಾರದಂದು ಕಾಂಗ್ರೆಸ್ ಯುವ ನಾಯಕರಾದ ರಾಹುಲ್ ಜಾರಕಿಹೊಳಿ ಮತ್ತು ಪ್ರಿಯಾಂಕಾ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ಜಾಥಾ ನಡೆಸಿದರು.

ಬ್ಯಾಳಿ ಕಾಟಾದಿಂದ ಆರಂಭವಾದ ಸೈಕಲ್ ಜಾಥಾಗೆ ಯುವ ನಾಯಕರಾದ ರಾಹುಲ್ ಹಾಗೂ ಪ್ರಿಯಾಂಕಾ ಅವರು ಚಾಲನೆ ನೀಡಿದರು. ಜಾಥಾ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಮುಕ್ತಾಯವಾಯಿತು.

ಜಾಥಾ ಉದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಕೂಡಲೇ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು. ಇಲ್ಲದಿದ್ದರೇ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾಥಾದಲ್ಲಿ ಮುಖಂಡರಾದ ವಿವೇಕ ಜತ್ತಿ, ಬಸವರಾಜ ಸಾಯಣ್ಣವರ, ರಾಹುಲ್ ಬಡೆಸಗೋಳ, ರೆಹಮಾನ್ ಮೊಕಾಶಿ, ಪ್ರವೀಣ ಗುಡ್ಡಾಕಾಯಿ, , ಸುನೀಲ ಅಂಕದವರ, ಕಲ್ಪನಾ ಕರೆನ್ನವರ್, ಯಶೋಧಾ ಬಿರಡಿ, ಶಿವು ಕಿಲಾರಿ, ಬಸವಣ್ಣೆಪ್ಪ ಪರುಶೆಟ್ಟಿ, ಇಮ್ರಾನ್ ತಪಕೀರ್, ರಾಜು ಮೇದಾರ, ಪ್ರಕಾಶ ಬಸಾಪುರೆ, ಮಾರುತಿ ಗುಟಗುದ್ದಿ, ಜುಬೇರ್ ಮಿರ್ಜಾಬಾಯಿ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

Related posts: