RNI NO. KARKAN/2006/27779|Saturday, July 12, 2025
You are here: Home » breaking news » ಗೋಕಾಕ:ರೈತರಿಗೆ ಬಿತ್ತನೆ ಬೀಜ ವಿತರಿಸಿದ ನಾಗಪ್ಪ ಶೇಖರಗೋಳ

ಗೋಕಾಕ:ರೈತರಿಗೆ ಬಿತ್ತನೆ ಬೀಜ ವಿತರಿಸಿದ ನಾಗಪ್ಪ ಶೇಖರಗೋಳ 

ರೈತರಿಗೆ ಬಿತ್ತನೆ ಬೀಜ ವಿತರಿಸಿದ ನಾಗಪ್ಪ ಶೇಖರಗೋಳ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 29

 

ನಗರದ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮುಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ರೈತ ಸಂರ್ಪಕ ಕೇಂದ್ರಗಳಾದ ಗೋಕಾಕ, ಅರಭಾವಿ, ಕೌಜಲಗಿ ಹಾಗೂ ಬೀಜ ಮಾರಾಟ ಕೇಂದ್ರಗಳ ಜೊತೆಗೆ 18 ಉಪ ಮಾರಾಟ ಕೇಂದ್ರಗಳಲ್ಲಿಯೂ ಬೀಜಗಳನ್ನು ವಿತರಿಸಲಾಗುತ್ತಿದೆ ರೈತರಿಗೆ ಬೇಕಾಗುವ ಸಾಕಷ್ಟು ಪ್ರಮಾಣದಲ್ಲಿ ಸೋಯಾಬಿನ, ಗೋವಿನ ಜೋಳ, ಹೆಸರು, ಸೂರ್ಯಕಾಂತಿ, ಹೈಬ್ರೀಡ್ ಜೋಳ ಇತ್ಯಾದಿ ಬೆಳೆಗಳ ಬೀಜಗಳನ್ನು ದಾಸ್ತಾನು ಮಾಡಿ ವಿತರಿಸಲಾಗುತ್ತಿದ್ದು, ರೈತರು ಆಧಾರ ಕಾರ್ಡ, ಪಹಣಿ ಪತ್ರಿಕೆ, ಬ್ಯಾಂಕ್ ಪಾಸಬುಕ್ಕುಗಳ ಝರಾಕ್ಸ ಪ್ರತಿಗಳೊಂದಿಗೆ ಬಂದು ಕೋವಿಡ್-19 ನಿಯಮಾವಳಿಗಳ ಪ್ರಕಾರ ಮಾಸ್ಕ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕು. ಸೋಯಾಬಿನ ಬಿತ್ತನೆ ಮಾಡಲು ಜೂ-1 ರಿಂದ ಜುಲೈ 15ರ ವರೆಗೆ ಸಮಯವಕಾಶವಿದ್ದು ಹದವಾದ ಮಳೆಯಾದ ಮೇಲೆ ಬಿತ್ತನೆ ಮಾಡಬೇಕು. ನೀರಾವರಿ ಸೌಲಭ್ಯವಿರುವವರು ಮೊದಲು ನೀರು ಹಾಯಿಸಿ ನಂತರ ಬಿತ್ತನೆ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ ನದಾಫ, ಶಾಸಕರ ಇನ್ನೊರ್ವ ಸಹಾಯಕ ನಿಂಗಪ್ಪ ಕುರಬೇಟ, ಕೃಷಿ ಅಧಿಕಾರಿಗಳಾದ ಎಸ್.ಬಿ. ಕರಗಣ್ಣಿ, ಶಂಕರ ಹಳದಮನಿ, ಸಹಾಯಕ ಕೃಷಿ ಅಧಿಕಾರಿ ವಿ.ಪಿ. ಹಿರೇಮಠ, ರೈತರಾದ ಕಲ್ಲಪ್ಪ ಕುದರಿ, ಬಾಳಪ್ಪ ಕಾಪಸಿ, ಯಮನಪ್ಪ ಚುಂಚನೂರ,ವಿಠ್ಠಲ ಮೆಳವಂಕಿ, ಅಡಿವೆಪ್ಪ ಹಾದಿಮನಿ ಸೇರಿದಂತೆ ಅನೇಕರು ಇದ್ದರು.

Related posts: