RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಬಜರಂಗದಳ ವತಿಯಿಂದ ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ

ಗೋಕಾಕ:ಬಜರಂಗದಳ ವತಿಯಿಂದ ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ 

ಬಜರಂಗದಳ ವತಿಯಿಂದ ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ, 22 :

 

ಇಲ್ಲಿಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ವತಿಯಿಂದ ನಗರದ ಕೊರೊನಾ ಸೋಂಕಿತರು ಹಾಗೂ ನಿಧನರಾದವರಿಗಾಗಿ ಪ್ರಾರಂಭಿಸಲಾದ ಉಚಿತ ಅಂಬುಲೆನ್ಸ್ ಸೇವೆಗೆ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಶನಿವಾರದಂದು ನಗರದ ಪಟಗುಂದಿ ಮಾರುತಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭಜರಂಗದಳ ಬೆಳಗಾವಿ ವಿಭಾಗ ಸಂಯೋಜಕ ಸದಾಶಿವ ಗುದಗ್ಗೋಳ ಮಾತನಾಡುತ್ತ, ಜನತೆ ಧೈರ್ಯದಿಂದ ಈ ಕೊರೊನಾ ವೈರಸ್‍ನ್ನು ಹೆದರಿಸಿ, ನಿಮ್ಮೊಂದಿಗೆ ನಾವಿದ್ದೇವೆ. ಈಗ ನಗರ ಘಟಕಕ್ಕೆ ಪ್ರಾರಂಭಿಸಲಾದ ಅಂಬುಲೆನ್ಸ್ ಸೇವೆಯನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೂ ನೀಡಲಾಗುವುದು. ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಈ ಕೊರೊನಾ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಕರಿಸುವಂತೆ ಕೋರಿದರು.
ಈ ಸೇವೆಗಾಗಿ ಲಕ್ಕಪ್ಪ ನಂದಿ – 7019464012 ಹಾಗೂ ಕಿರಣ ಉತಾರಿ – 9108764499 ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‍ನ ತಾಲೂಕಾ ಕಾರ್ಯದರ್ಶಿ ಸಾಯಿಕುಮಾರ ನಾಯಿಕ, ಭಜರಂಗ ದಳದ ತಾಲೂಕಾ ಸಂಯೋಜಕ ಪುರುಷೋತ್ತಮ ಒಡೆಯರ್, ಪೊಲೀಸ್ ಇಲಾಖೆಯ ಎ.ಎಸ್.ಐ. ಆರ್.ಎಚ್.ಮುಲ್ಲಾ, ಹವಾಲ್ದಾರ ಆರ್.ಆರ್.ಕಿಚಡಿ, ಅರ್ಚಕ ಕೃಷ್ಣಾ ಹೊನ್ನತ್ತಿ ಸೇರಿದಂತೆ ಅನೇಕು ಇದ್ದರು.

 

Related posts: