RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಶರಣ ಸಂಸ್ಕೃತಿ ಉತ್ಸವ ಗೋಕಾಕ ಭಾಗದ ಸಾಂಸ್ಕೃತಿಕ , ಧಾರ್ಮಿಕ ಹಬ್ಬವಾಗಿ ಬೆಳೆದಿದೆ : ಶಾಸಕ ಸತೀಶ ಅಭಿಮತ

ಗೋಕಾಕ:ಶರಣ ಸಂಸ್ಕೃತಿ ಉತ್ಸವ ಗೋಕಾಕ ಭಾಗದ ಸಾಂಸ್ಕೃತಿಕ , ಧಾರ್ಮಿಕ ಹಬ್ಬವಾಗಿ ಬೆಳೆದಿದೆ : ಶಾಸಕ ಸತೀಶ ಅಭಿಮತ 

ಶರಣ ಸಂಸ್ಕೃತಿ ಉತ್ಸವ ಗೋಕಾಕ ಭಾಗದ ಸಾಂಸ್ಕೃತಿಕ , ಧಾರ್ಮಿಕ ಹಬ್ಬವಾಗಿ ಬೆಳೆದಿದೆ : ಶಾಸಕ ಸತೀಶ ಅಭಿಮತ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 5 :

 
ಶರಣ ಸಂಸ್ಕೃತಿ ಉತ್ಸವ ಗೋಕಾಕ ಭಾಗದ ಸಾಂಸ್ಕೃತಿಕ , ಧಾರ್ಮಿಕ ಹಬ್ಬವಾಗಿ ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು

ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠಕ್ಕೆ ಭೇಟಿ ನೀಡಿ ಶ್ರೀಮಠದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು

ನಿಗದಿತ ಕಾರ್ಯಕ್ರಮಗಳು ಇರುವುದರಿಂದ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಲು ಆಗಲಿಲ್ಲ, ಖ್ಯಾತ ವಿದ್ವಾಂಸರು , ಚಿಂತಕರನ್ನು ಕರೆಯಿಸಿ ಜನರಲ್ಲಿ ಜಾಗೃತಿ ಮೂಡಿಸಿ ಸಮಾಜವನ್ನು ತಿದ್ದುವ ಕಾರ್ಯವಾಗಿದೆ. ನಾವು ಸಹ ಸಮಾಜದಲ್ಲಿ ಮೂಢನಂಬಿಕೆ ಹೋಗಲಾಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದೆ. ಮುಂದಿನ ದಿನಗಳಲ್ಲಿ ಶ್ರೀಮಠದ ಸಹಯೋಗದಲ್ಲಿ ಹಲವಾರು ರಚನಾತ್ಮಕ ಕಾರ್ಯಗಳನ್ನು ಮಾಡಲು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಂಡು ಮನ್ನಿಕೇರಿ, ವಿವೇಕ ಜತ್ತಿ, ಪ್ರಶಾಂತ ಕುರಬೇಟ, ಶಿವು ಪಾಟೀಲ, ಮಾಯಪ್ಪ ತಹಶೀಲ್ದಾರ, ರಿಯಾಜ ಚೌಗಲಾ , ಆಡಳಿತಾಧಿಕಾರಿ ಅಡಿವೇಶ ಗವಿಮಠ ಸೇರಿದಂತೆ ಇತರರು ಇದ್ದರು

Related posts: