RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಕೃಷಿ ಸಚಿವರು ಹಾದಿ ಬೀದಿಯಲ್ಲಿ ಜನಸಮಾನ್ಯರು ಮಾತನಾಡುವ ಹಾಗೇ ಮಾತನಾಡುವುದು ಸರಿಯಲ್ಲ : ಶಾಸಕ ಸತೀಶ ಆಕ್ರೋಶ

ಗೋಕಾಕ:ಕೃಷಿ ಸಚಿವರು ಹಾದಿ ಬೀದಿಯಲ್ಲಿ ಜನಸಮಾನ್ಯರು ಮಾತನಾಡುವ ಹಾಗೇ ಮಾತನಾಡುವುದು ಸರಿಯಲ್ಲ : ಶಾಸಕ ಸತೀಶ ಆಕ್ರೋಶ 

ಕೃಷಿ ಸಚಿವರು ಹಾದಿ ಬೀದಿಯಲ್ಲಿ ಜನಸಮಾನ್ಯರು ಮಾತನಾಡುವ ಹಾಗೇ ಮಾತನಾಡುವುದು ಸರಿಯಲ್ಲ : ಶಾಸಕ ಸತೀಶ ಆಕ್ರೋಶ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 27 :

 
ರಾಜ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಜವಾಬ್ದಾರಿಯಿಂದ ರೈತನ ನೋವನ್ನು ಅರಿತು ಮಾತನಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಬುಧವಾರದಂದು ನಗರದ ಹಿಲ್ ಗಾರ್ಡನ್ ಆವರಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲಿಕರಣ ಇಲಾಖೆಯಿಂದ ಯಮಕನಮರಡಿ ಮತಕ್ಷೇತ್ರದ 15 ವಿಕಲಚೇತನ ಫಲಾನುಭವಿಗಳಿಗೆ ನೀಡಲಾದ ತ್ರೀಚಕ್ರ ವಾಹನಗಳನ್ನು ವಿತರಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಜವಾಬ್ದಾರಿಯ ಸ್ಥಾನದಲ್ಲಿರುವ ಕೃಷಿ ಸಚಿವರು ಹಾದಿ ಬೀದಿಯಲ್ಲಿ ಜನಸಮಾನ್ಯರು ಮಾತನಾಡುವ ಹಾಗೇ ಮಾತನಾಡುವುದು ಸರಿಯಲ್ಲ. ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳ ಹಿಂಪಡೆಯುವಂತೆ ಹೋರಾಟ ನಡೆಸುವುದು ರೈತರ ಹಕ್ಕಾಗಿದೆ. ರೈತರ ಹೋರಾಟ ಪಕ್ಷಾತೀತವಾಗಿದೆ. ಇದರ ಬಗ್ಗೆ ಯಾರು ಹಗುರವಾಗಿ ಮಾತನಾಡಬಾರದು. ಪ್ರತಿಭಟನೆಯನ್ನು ಹತ್ತಿಕ್ಕುವ ಕಾರ್ಯವನ್ನು ಮಾಡದೇ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ದೆಹಲಿಯ ಕೆಂಪು ಕೋಟೆಯ ಮೇಲೆ ರೈತ ಸಂಘಟನೆಗಳ ತಮ್ಮ ಧ್ವಜ ಹಾರಿಸಿದ್ದಾರೆ ಹೊರತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿಲ್ಲ. ರೈತರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂಬ ಪ್ರಶ್ನೆಯೇ ಬರುವದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಹುದಲಿ ತಾ.ಪಂ ಸದಸ್ಯ ಅಜ್ಜಪ್ಪ ಮಳಗಲಿ, ಮುಖಂಡರಾದ ಅಡಿವೆಪ್ಪ ಮಾಳಗಿ, ಚನ್ನಬಸು ಪವಾಡಿ, ಕರೆಪ್ಪ ನಾಯಿಕ ಸೇರಿದಂತೆ ಅನೇಕರು ಇದ್ದರು.

Related posts: