ಗೋಕಾಕ:ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ : ನೂತನ ಸದಸ್ಯರಿಂದ ಸಚಿವರಿಗೆ ಅಭಿನಂದನೆ
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ : ನೂತನ ಸದಸ್ಯರಿಂದ ಸಚಿವರಿಗೆ ಅಭಿನಂದನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 2 :
ಬೆಳಗಾವಿ ಗ್ರಾಮೀಣ ಕ್ಷೇತ್ರದ 41 ಗ್ರಾಮ ಪಂಚಾಯಿತಿಗಳಲ್ಲಿ 24 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿರುವ ಪ್ರಯುಕ್ತ ಶನಿವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ, ಸುಳೆಭಾಂವಿ, ಕರಡಿಗುದ್ದಿ, ಬಿ.ಕೆ ಕಂಗ್ರಾಳಿ ಸೇರಿದಂತೆ ಹಲವಾರು ಗ್ರಾಮ ಪಂಚಾಯಿತಿಗಳ ಸದಸ್ಯರು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರದ ಮುಖಂಡರುಗಳಾದ ಸಂಭಾಜಿ ಯಮೋಲಾಜಿ, ಪುಂಡಲಿಕ ಸರವದೆ, ಗಣಪತಿ ಹೊಸಮನಿ, ಕಲ್ಲಪ್ಪ ನೇಸರಗಿ, ಮಲ್ಲಪ್ಪ ಭಂಗೆನ್ನವರ , ದ್ಯಾಮಣ್ಣಾ ಕಾವತಗಾರ, ಅಶೋಕ ಯರಮ್ಮರವಿ, ದ್ಯಾಮಣ್ಣಾ ಕಳ್ಳಗೋಳ, ಅಶೋಕ ಒಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಬರುವ ಒಟ್ಟು 719 ಸ್ಥಾನಗಳ ಪೈಕಿ ಒಟ್ಟು 339 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಶಾಲಿಯಾದರೆ , 266 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರೆ ಇನ್ನುಳಿದ 117 ಸ್ಥಾನಗಳಲ್ಲಿ ಇತರರು ಆಯ್ಕೆಯಾಗಿದ್ದು, ಈ ಬಾರಿ ಬೆಳಗಾವಿ ಕ್ಷೇತ್ರದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆಂದು ಕ್ಷೇತ್ರದ ಮುಖಂಡ ನಾಗಪ್ಪ ಪಾರ್ವತಿ ತಿಳಿಸಿದ್ದಾರೆ.
