RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವ ಕಾರ್ಯಮಾಡಬೇಕು : ಅಶೋಕ ಚಂದರಗಿ

ಗೋಕಾಕ:ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವ ಕಾರ್ಯಮಾಡಬೇಕು : ಅಶೋಕ ಚಂದರಗಿ 

ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವ ಕಾರ್ಯಮಾಡಬೇಕು : ಅಶೋಕ ಚಂದರಗಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 29 :

 

ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಮೌಲ್ಯಾಧಾರಿತ ಸುದ್ದಿಗಳಿಂದ ಜನರ ವಿಶ್ವಾಸ ಉಳಿಸಿಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು

ರವಿವಾರದಂದು ನಗರದ ಶ್ರೀ ವೆಂಕಟೇಶ್ವರ ಸಭಾಂಗಣದಲ್ಲಿ ಗುರುಮಾರ್ಗ ಶೈಕ್ಷಣಿಕ ಮಾಸ ಪತ್ರಿಕೆ ಅವರು ಹಮ್ಮಿಕೊಂಡ ಆದರ್ಶ ಶಿಕ್ಷಕ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವ ಸುದ್ದಿಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯಮಾಡಬೇಕು ಇಂದು ರಾಜಕೀಯಕ್ಕಿಂತ ಸಮಾಜಿಕ ನಿಲುವಿಗೆ ಜನತೆ ಆಸಕ್ತಿ ತೊರಿಸುತ್ತಿದ್ದಾರೆ. ಒಳ್ಳೆಯ ಸಂದೇಶಗಳನ್ನು ಭಿತ್ತರಿಸಿ , ಒಳ್ಳೆಯ ಜನರನ್ನು ತಲುಪಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿಪ್ಪಾಣಿಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಮಾತನಾಡಿ ಗೋಕಾಕ ನಾಡು ಕಲೆ, ಸಂಸ್ಕೃತಿ , ಸಾಹಿತ್ಯವನ್ನು ಭಾನೆತ್ತರಕ್ಕೆ ಏರಿಸುವಂತಾ ಕಾರ್ಯಮಾಡುತ್ತಿದ್ದೆ . ಶೈಕ್ಷಣಿಕ ಪ್ರಗತಿಯೊಂದಿಗೆ ಸಾಂಸ್ಕೃತಿಕ ಬೆಳವಣಿಗೆಗೂ ಶ್ರಮಿಸುತ್ತಿದೆ. ಮಕ್ಕಳಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಅವರನ್ನು ಉತ್ತಮ ಪ್ರತಿಭ್ವಾನಿತರನ್ನಾಗಿಸಲು ಶ್ರಮಿಸುತ್ತಿರುವ ಗುರುಮಾರ್ಗ ಶೈಕ್ಷಣಿಕ ಪತ್ರಿಕೆಯ ಪಾತ್ರ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿಗಳಾದ ಜಿ.ಬಿ.ಬಳಗಾರ , ಪಿ.ಬಿ ಹಿರೇಮಠ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕೆಂಪವ್ವ ಹರಿಜನ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆರ್‌.ಕೆ ಬಿಸಿರೊಟ್ಟಿ , ಕಾಗವಾಡ ಶಿಶು ಅಭಿವೃದ್ಧಿ ಅಧಿಕಾರಿ ಸಂಜು ಸದಲಗಿ , ರಾಜ್ಯ ಸಿರಿಗನ್ನಡ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ರಜನಿ ಜಿರಗ್ಯಾಳ, ಡಾ.ಅಶೋಕ ಜಿರಗ್ಯಾಳ , ಗೋವಿಂದ ಮಾಳಗಿ , ಬಿ.ಬಿ. ಪಟಗುಂದಿ ಪತ್ರಿಕೆ ಸಂಪಾದಕ ವಿರೇಂದ್ರ ಪದಕಿ, ರಾಜು ಬದಾಮಿ , ವಿಜಯಲಕ್ಷ್ಮೀ ಧಾರವಾಡಕರ ಇದ್ದರು.

ಸಂಗೀತಾ ಬನ್ನೂರ ಸ್ವಾಗತಿಸಿದರು. ಟಿ.ಬಿ ಬಿಲ್ ನಿರೂಪಿಸಿದರು ಕೊನೆಯಲ್ಲಿ ಎ.ಎ ನಧಾಪ ವಂದಿಸಿದರು

Related posts: