RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ: ಬಿಜೆಪಿ ಶಾಸಕ ಬಸವರಾಜ ಯತ್ನಾಳ ಪ್ರತಿಕೃತಿ ದಹಿಸಿ ಕರವೇ ಪ್ರತಿಭಟನೆ

ಗೋಕಾಕ: ಬಿಜೆಪಿ ಶಾಸಕ ಬಸವರಾಜ ಯತ್ನಾಳ ಪ್ರತಿಕೃತಿ ದಹಿಸಿ ಕರವೇ ಪ್ರತಿಭಟನೆ 

ಬಿಜೆಪಿ ಶಾಸಕ ಬಸವರಾಜ ಯತ್ನಾಳ ಪ್ರತಿಕೃತಿ ದಹಿಸಿ ಕರವೇ ಪ್ರತಿಭಟನೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 21 :   ಕನ್ನಡಪರ ಹೋರಾಟಗಾರಿಗೆ ಡೋಂಗಿ ಹೋರಾಟಗಾರರು ಎಂದು ಅಪಮಾನಿಸಿರುವ ವಿಜಯಪುರ ಬಿಜೆಪಿ ಶಾಸಕ ಬಸವರಾಜ ಯತ್ನಾಳ ಅವರ ಹೇಳಿಕೆಯನ್ನು ಖಂಡಿಸಿ ಶನಿವಾರದಂದು ನಗರದ ವಾಲ್ಮೀಕಿ ವೃತ್ತದಲ್ಲಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶಾಸಕ ಬಸವರಾಜ ಯತ್ನಾಳ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಯಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಬಸವರಾಜ ಖಾನಪ್ಪನವರ , ಕೃಷ್ಣಾ ಖಾನಪ್ಪನವರ , ದೀಪಕ ಹಂಜಿ , ಹನೀಪ ಸನದಿ , ನಿಜಾಮ ನಧಾಪ , ಮಲ್ಲು ಸಂಪಗಾರ , ಕಿರಣ ತೊಗರಿ , ರಾಮಪ್ಪಾ ಸಣ್ಣಲಗಮ್ಮನವರ , ಬಸು ಗಾಡಿವಡ್ಡರ , ರಾಮ ಕೊಂಗನ್ನೊಳ್ಳಿ ,ರಾಮ ಕುಡೆಮ್ಮಿ , ಶೆಟ್ಟೆಪ್ಪಾ ಗಾಡಿವಡ್ಡರ , ಸುರೇಶ ಪತ್ತಾರ , ದುಂಡಪ್ಪಾ ಬಾವಿಕಟ್ಟಿ , ವಿಠ್ಠಲ ಹಂಜಿ , ಯಲ್ಲಾಲಿಂಗ ಕಪ್ಪಲಗುದ್ದಿ , ಸತ್ತಾರ ಬೇಪಾರಿ , ಹಣಮಂತ ಅಮ್ಮಣಗಿ , ಆನಂದ ಬಿರಡಿ , ಯಮನಪ್ಪಾ ಕಡಕೋಳ , ಹನಮಂತ ಮೆಗಡಿ , ಭೂಮಿಕಾ ತಹಶೀಲ್ದಾರ , ಲಕ್ಮೀ ಬಿ ಕೆ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು

Related posts: