ಬೆಳಗಾವಿ:ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ : ರೈಲ್ವೇ ಟಿಸಿ ಮೇಲೆ ದೂರು ದಾಖಲು

ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ : ರೈಲ್ವೇ ಟಿಸಿ ಮೇಲೆ ದೂರು ದಾಖಲು
ಬೆಳಗಾವಿ ಸೆ 5: ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಸಿದ ರೈಲ್ವೇ ಟಿಸಿ ವಿರುದ್ಧ ಬೆಳಗಾವಿ ರೈಲ್ವೇ ಪೊಲೀಸರಿಗೆ ದೂರು ದಾಖಲಿಸಿದ ಘಟನೆ ನಡೆದಿದೆ
ಮಂಗಳವಾರ ಬೆಳಿಗ್ಗೆ ರೈಲೇ ಸಂಖ್ಯೆ 16508 ಅಜ್ಮೇರ ಎಕ್ಸಪ್ರೇಸ್ ನಲ್ಲಿ ಲೋಂಡಾ ದಿಂದ ಬೆಳಗಾವಿಗೆ ಮಾರ್ಗ ಮದ್ಯ ಪ್ರಾಯಾಣಿಕ ಒಬ್ಬರು ಧೂಮಪಾನ ಮಾಡಿದ್ದಾರೆ ಅದನ್ನು ಪ್ರಶ್ನಿಸಿ ಇನ್ನೋರ್ವ ಪ್ರಯಾಣಿಕ ಲೋಂಡಾ ಗ್ರಾಮದ ನಿವಾಸಿ ದಿಪಕ ಅಶೋಕ ಮಡ್ಡಿ ಎಂಬುವವರು ರೈಲಿನಲ್ಲಿ ಧೂಮಪಾನ ಮಾಡ ಬೇಡಿ ಇದರಿಂದ ಸಹ ಪ್ರಯಾಣಿಕರಿಗೆ ತೊಂದರೆ ಯಾಗುತ್ತದೆ ಇದನ್ನು ನಿಲ್ಲಿಸಿ ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಬುಧ್ದಿವಾದ ಹೇಳಿದಾಗ ಇಬ್ಬರು ಮಧ್ಯೆ ವಾಗ್ವಾದವಾಗಿ ದಿಪಕ ಎಂಬಾತ ರೈಲ್ವೇ ಟಿಸಿಗೆ ದೂರ ನೀಡಲು ಹೋದಾಗ ಟಿಸಿ ಧೂಮಪಾನ ಮಾಡುವವರ ಮೇಲೆ ಕ್ರಮ ಜರುಗಿಸದೆ ದೀಪಕ ಮತ್ತು ಗೆಳೆಯರ ಮೇಲೆ ರೇಗಿ ಅವರಿಗೆ ದಂಡಹಾಕಿದ್ದಾನೆ ಇದನ್ನು ಪ್ರಶ್ನಿಸಿ ಪ್ರಯಾಣಿಕರ ಜೋತೆಗೆ ಸರಿಯಾಗಿ ವರ್ತಸಿದೆ ದುರ್ವತನೆ ಮಾಡಿದ್ದಾನೆಂದು ದೂರುದಾರ ದೀಪಕ ಮಡ್ಡಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ
ದೂರು ಸ್ವೀಕರಿಸದ ರೈಲ್ವೇ ಪೊಲೀಸರು ಇದನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಟಿಸಿ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದ್ದಾರೆ ದೀಪಕ ಮಡ್ಡಿ ಪತ್ರಿಕೆಗೆ ತಿಳಿಸಿದ್ದಾರೆ