ಗೋಕಾಕ:ಛಾಯಾಗ್ರಹಣ ಇಂದು ಬದುಕಿನ ಒಂದು ಭಾಗವಾಗಿದೆ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ
ಛಾಯಾಗ್ರಹಣ ಇಂದು ಬದುಕಿನ ಒಂದು ಭಾಗವಾಗಿದೆ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ 19 :
ಅವಿಸ್ಮರಣೆಯ ಕ್ಷಣಗಳನ್ನು ಸೆರೆ ಹಿಡಿದು ನೂರಾರು ವರ್ಷಗಳ ಕಾಲ ಅವುಗಳನ್ನು ಜೀವಂತವಾಗಿಡುವ ಮಹತ್ವದ ವೃತ್ತಿ ಛಾಯಾಗ್ರಹಣ ವೃತ್ತಿಯಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ಬುಧವಾರದಂದು ನಗರದ ಶೂನ್ಯ ಸಂಪಾದನಾ ಮಠದಲ್ಲಿ ಗೋಕಾಕ ತಾಲೂಕಾ ವೃತ್ತಿ ನಿರತ ಛಾಯಾಗ್ರಾಹಕ ಸಂಘದಿಂದ ಹಮ್ಮಿಕೊಂಡ ವಿಶ್ವ ಛಾಯಾಗ್ರಹಣ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಛಾಯಾಗ್ರಹಣ ಇಂದು ಬದುಕಿನ ಒಂದು ಭಾಗವಾಗಿದೆ, ಹೃದಯಶೀಲತೆಯಿಂದ ಛಾಯಾಗ್ರಾಹಕರು ಎಲ್ಲ ಸಂದರ್ಭಗಳಲ್ಲೂ ಪಾಲ್ಗೊಂಡು ತಮ್ಮ ಕೌಶಲ್ಯಗಳಿಂದ ಛಾಯಾಚಿತ್ರಗಳನ್ನು ಸೆರೆ ಹಿಡಿದು ಅವುಗಳು ಸದಾ ನಮ್ಮೆದುರಿಗೆ ಉಳಿಯುವಂತೆ ಮಾಡುತ್ತಿದ್ದಿರಿ, ಇಂದು ಕೋರೋನಾ ಮಾಹಾಮಾರಿಯಿಂದ ಎಲ್ಲರ ಬದುಕು ಸಂಕಷ್ಟದಲ್ಲಿದೆ. ಧೈರ್ಯದಿಂದ ಈ ಸಮಸ್ಯೆಯನ್ನು ಎದುರಿಸಿ. ಸಾರ್ವಜನಿಕರೊಂದಿಗೆ ಸದಾ ಒಡನಾಡಿಯಾಗಿರುವ ಛಾಯಾಗ್ರಾಹಕರು ಕೊರೋನಾ ವೈರಸ್ಸ್ ಕುರಿತು ಜಾಗೃತಿ ಮೂಡಿಸಿ ಈ ಮಹಾಮಾರಿ ಹೊಡೆದೊಡಿಸಲು ಶ್ರಮಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ, ಡಾ.ಬಸವರಾಜ ಭಾಗೋಜಿ, ಸಿಡಿಪಿಓ ಕಾರ್ಯಾಲಯದ ಸುರೇಶ ಪಟ್ಟಣಶೆಟ್ಟಿ ಅವರನ್ನು ಸಂಘದ ವತಿಯಿಂದ ಸತ್ಕರಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನಾಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶಿರ್ವಚನ ನೀಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆನಂದ ವಣ್ಣೂರ ವಹಿಸಿದ್ದರು.
ಈ ಸಂದರ್ಭದಲ್ಲಿ ಛಾಯಾಗ್ರಾಹಕರಾದ ಬಿ.ಪ್ರಭಾಕರ, ಗಂಗಾಧರ ಕಳ್ಳಿಗುದ್ದಿ, ಮಲ್ಲಿಕಾರ್ಜುನ ಕೆ.ಆರ್. ಶೇಖರ ರಜಪೂತ, ಮಧು ಸೋನಗೋಜಿ, ಲಕ್ಷ್ಮಣ ಯಮಕನಮರಡಿ, ಆನಂದ ಹಳಕಟ್ಟಿ, ರಾಜು ಗಂಡಗಾಳೆ, ಗೋಪಿ ಗುಡಕ್ಷೇತ್ರ, ರವಿ ಉಪ್ಪಿನ, ವಿರೇಶ ಕೊಳಂದೂರ, ನಾರಾಯಣ ಗಂಡಗಾಳೆ, ಕುಮಾರ ಹುಣಶ್ಯಾಳ, ಸತೀಶ ಗೌಳಿ, ರಾಜು ಕೊಲ್ಲಾಪೂರೆ, ಕಿರಣ ಮುರ್ಕಿಭಾಂವಿ, ಮುಕೇಶ ಹಾಗರಗಿ, ಬಸವರಾಜ ಹಿರೇಮಠ ಸೇರಿದಂತೆ ಅನೇಕರು ಇದ್ದರು