RNI NO. KARKAN/2006/27779|Monday, June 29, 2026
You are here: Home » breaking news » ಗೋಕಾಕ:ಮಹಾಂತಯ್ಯ ಅಜ್ಜನವರ ಜನ್ಮದಿನದ ಪ್ರಯುಕ್ತ ಕರೊನಾ ವಾರಿಯರ್ಸ್‍ಗಳಿಗೆ ಅಭಿನಂದನಾ ಸಮಾರಂಭ

ಗೋಕಾಕ:ಮಹಾಂತಯ್ಯ ಅಜ್ಜನವರ ಜನ್ಮದಿನದ ಪ್ರಯುಕ್ತ ಕರೊನಾ ವಾರಿಯರ್ಸ್‍ಗಳಿಗೆ ಅಭಿನಂದನಾ ಸಮಾರಂಭ 

ಮಹಾಂತಯ್ಯ ಅಜ್ಜನವರ ಜನ್ಮದಿನದ ಪ್ರಯುಕ್ತ ಕರೊನಾ ವಾರಿಯರ್ಸ್‍ಗಳಿಗೆ ಅಭಿನಂದನಾ ಸಮಾರಂಭ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಜೂ 6 :

 

ಸಮೀಪದ ಹೂಲಿಕಟ್ಟಿ ಗ್ರಾಮದ ಗರಗ ದುರ್ಗಾಮಾತಾ ಸೇವಾ ಸಮಿತಿಯವರ ಆಶ್ರಯದಲ್ಲಿ ಮಹಾಂತಯ್ಯ ಅಜ್ಜನವರ ಜನ್ಮದಿನದ ಪ್ರಯುಕ್ತ ಕರೊನಾ ವಾರಿಯರ್ಸ್‍ಗಳಿಗೆ ಅಭಿನಂದನಾ, ಅನ್ನದಾಸೋಹ ಕಾರ್ಯಕ್ರಮ ಶುಕ್ರವಾರ ಜೂ.4ರಂದು ನಡೆಯಿತು.
ಹೂಲಿಕಟ್ಟಿ ಗ್ರಾಮದ ಬಸವಾನಂದ ಅಜ್ಜನವರು ಕರೊನಾ ವಾರಿಯರ್ಸ್‍ಗಳಿಗೆ ಅಭಿನಂದನಾ ಪತ್ರ ನೀಡಿ ಸತ್ಕರಿಸಿ ಮಾತನಾಡಿ, ಮನುಷ್ಯ ಬದುಕಿನಲ್ಲಿ ಸ್ವಲ್ಪಮಟ್ಟಿಗಾದರೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ವಲಯದಲ್ಲಿ ಸೇವೆಗೈಯುವ ಮನೋಭಾವ ಬೆಳಸಿಕೊಳ್ಳಬೇಕು ಎಂದರು.
ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ, ಗೋಕಾಕ ಸಾರ್ವಜನಿಕ ಆಸ್ಪತ್ರೆ, ಕೊಳವಿ ಗ್ರಾಮ ಪಂಚಾಯಿತಿ, ತವಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವಾ ನಿರತ ಕರೊನಾ ವಾರಿಯರ್ಸ್‍ಗಳಿಗೆ ಅಭಿನಂದನಾ ಪತ್ರ ನೀಡಿ ಸತ್ಕರಿಸಲಾಯಿತು.
ಪಾಂಡುರಂಗ ದೊಡ್ಡಮನಿ, ರವಿ ಬಂಗಾರಿ, ಶಿವಾನಂದ ನಾಯಿಕ, ಬಾಲಕೃಷ್ಣ ಸಣ್ಣಕಲ್ಲ, ಶಿವಮೂರ್ತಿ.ಆರ್.ಕಿಚಡಿ, ವೀರೇಶ ಸೊಗಲಿ, ಅಭಿಮನ್ಯು ಕೊಮನ್ನವರ, ಪ್ರದೀಪ ನಾಯ್ಕ, ರಾಮಣ್ಣ ಕೆಳಗೇರಿ ಸೇರಿದಂತೆ ಕರೊನಾ ವಾರಿಯರ್ಸ್‍ಗಳು, ಸ್ಥಳೀಯರು, ಮತ್ತೀತರರು ಇದ್ದರು.

Related posts: