RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಶಿಕ್ಷಣಾಧಿಕಾರಿ ಎ.ಎಸ್ ಜೊಡಗೇರಿ ಅವರ ಸೇವೆ ಇತರರಿಗೆ ಮಾದರಿ : ಬಿ.ಆರ್.ಮುರಗೋಡ

ಗೋಕಾಕ:ಶಿಕ್ಷಣಾಧಿಕಾರಿ ಎ.ಎಸ್ ಜೊಡಗೇರಿ ಅವರ ಸೇವೆ ಇತರರಿಗೆ ಮಾದರಿ : ಬಿ.ಆರ್.ಮುರಗೋಡ 

ಶಿಕ್ಷಣಾಧಿಕಾರಿ ಎ.ಎಸ್ ಜೊಡಗೇರಿ ಅವರ ಸೇವೆ ಇತರರಿಗೆ ಮಾದರಿ : ಬಿ.ಆರ್.ಮುರಗೋಡ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 1 :

 

 
ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಶಿಕ್ಷಣಾಧಿಕಾರಿ ಎ.ಎಸ್ ಜೊಡಗೇರಿ ಅವರ ಸೇವೆ ಇತರರಿಗೆ ಮಾದರಿ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಮುರಗೋಡ ಹೇಳಿದರು

ಸೋಮವಾರದಂದು ನಗರದಲ್ಲಿ ಹಮ್ಮಿಕೊಂಡಿದ್ದ ಕಾಗವಾಡದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿಕ್ಷಣಾಧಿಕಾರಿ ಜೊಡಗೇರಿ ಅವರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಶಿಕ್ಷಕರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖೀ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಣಾಧಿಕಾರಿ ಎ.ಎಸ್.ಜೋಡಗೇರಿ  ಮಕ್ಕಳೊಂದಿಗೆ ಮತ್ತು ಶಿಕ್ಷಕರೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು.
ಸಂಘದ ಅಧ್ಯಕ್ಷ ಬಿ.ಆರ್.ಮುರಗೋಡ , ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ಎಸ್.ಕೆ, ಪದಾಧಿಕಾರಿಗಳಾದ ಟಿ. ಬಿ.ಬಿಲ್ , ಬಿ.ಎಂ. ಶಿವಾಪುರ , ವಿ.ಜಿ.ಮಿರ್ಜಿ , ಆರ್.ಎಂ.ಅಗಳನ್ನವರ , ಎನ್. ಟಿ. ಬಡವನ್ನಿ , ಐ.ಸಿ.ಅಂಗಡಿ , ಎಂ.ಸಿ.ಮಠದ , ಜಿ. ವಾಯ್. ಭಜಂತ್ರಿ , ವಾಯ್. ಎಚ್. ಕುರುಬಗಟ್ಟಿ , ಎಸ್. ಎ. ಡೊಂಗರೆ , ಎಸ್.ಎಸ್. ತೇರಣಿ ಮುಂತಾದವರು ಉಪಸ್ಥಿತರಿದ್ದರು.

Related posts: