RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:2019-20 ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಲ್ಲಿ ಹೊಲಿಗೆ ಯಂತ್ರ ವಿತರಣೆ

ಘಟಪ್ರಭಾ:2019-20 ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಲ್ಲಿ ಹೊಲಿಗೆ ಯಂತ್ರ ವಿತರಣೆ 

2019-20 ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಲ್ಲಿ ಹೊಲಿಗೆ ಯಂತ್ರ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮೇ 12 :

 

 

ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 10 ನೇ ವಾರ್ಡದಲ್ಲಿ ಎಸ್.ಸಿ. ಎಸ್.ಟಿ ಹಾಗೂ ಸಾಮಾನ್ಯ ಜನಾಂಗ ಫಲಾನುಭವಿಗಳಿಗೆ 2019-20 ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನದಲ್ಲಿ ಹೊಲಿಗೆ ಯಂತ್ರಗಳನ್ನು ಪ.ಪಂ ಸದಸ್ಯ ಸಲೀಮ ಎಚ್.ಕಬ್ಬೂರ ಮಂಗಳವಾರದಂದು ವಿತರಿಸಿದರು.
ನಂತರ ಮಾತನಾಡಿದ ಅವರು ಎಸ್.ಸಿ ಎಸ್.ಟಿ ಹಾಗೂ ಇತರೆ ಬಡ ಜನರು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರಲ್ಲದೇ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಭಾರತಿ ಚೌಗಲಾ, ಕಸ್ತೂರಿ ಚೌಧವ, ನಂದಾ ಪವಾರ, ಸುನೀತಾ ಗಾಡಿವಡ್ಡರ, ರೂಪಾ ಶಿಂದೆ, ಬೇಗಂ ಕಬ್ಬೂರ, ರಾಜು ಕಿತ್ತೂರ, ರತ್ನಾ ಮೇದಾರ, ಜುಬೇರ ಡಾಂಗೆ, ಪ.ಪಂ ಸಿಬ್ಬಂಧಿಗಳಾದ ಅಕ್ಷಯ ಮಾನಗಾಂವಿ ಸೇರಿದಂತೆ ಅನೇಕರು ಇದ್ದರು.

Related posts: