ಮೂಡಲಗಿ:ದಿನಬಳಕೆ ವಸ್ತುಗಳ ಕಿಟ್ ನೀಡಿ ಮಾನವೀಯತೆ ಮೆರೆದ ಶ್ರೇಯಸ್ ಚಂಡಕಿ
ದಿನಬಳಕೆ ವಸ್ತುಗಳ ಕಿಟ್ ನೀಡಿ ಮಾನವೀಯತೆ ಮೆರೆದ ಶ್ರೇಯಸ್ ಚಂಡಕಿ
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಎ 8 :
ದೇಶದಲ್ಲಿ ಕೋರೊನಾ ವೈರಸ್ ಹತೋಟಿಗೆ ತರಲು ಪ್ರಧಾನಮಂತ್ರಿ ಮೋದಿಯವರು ದೇಶವನ್ನು ಲಾಕ್‍ಡೌನ್ ಮಾಡಿರುವುದರಿಂದ ಕೂಲಿ ಮಾಡುವ ಬಡ ಜನತೆ ಕೆಲಸವಿಲ್ಲದೇ ಕಂಗೆಟ್ಟು ಹೋಗಿದ್ದಾರೆ. ಅಗತ್ಯ ವಸ್ತುಗಳನ್ನು ತರಲಾಗದ ಪರಿಸ್ಥಿತಿ ನಿರ್ಮಾಣವಾಗಿ ಬಡ ಕುಟುಂಬಗಳಿಗೆ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗುತ್ತಿದೆ. ಇದನ್ನು ಮನಕಂಡ ವಾರ್ಡ್ ನಂ 2ರ ಪುರಸಭೆ ಸದಸ್ಯರಾಗಿರುವ ಶಿವಪ್ಪ ಚಂಡಕಿ ಅವರ ಸುಪುತ್ರ ಶ್ರೇಯಸ್ ಚಂಡಕಿ ಪಟ್ಟಣದಲ್ಲಿನ ನೂರಕ್ಕೂ ಅಧಿಕ ಬಡ ಕುಟುಂಬಗಳಿಗೆ ದಿನ ನಿತ್ಯ ಉಪಯೋಗಿಸುವ ಅಗತ್ಯ ವಸ್ತುಗಳ ಕಿಟ್‍ಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಶಿವಲೀಲಾ ಚಂಡಕಿ, ಚಂದ್ರು ದರೂರ, ರಾಜಶೇಖರ ಮಗದುಮ್, ಈಶ್ವರ ಢವಳೇಶ್ವರ, ಲಕ್ಕಪ್ಪ ತಟಗಾರ, ಸತ್ಯಪ್ಪ ತಳವಾರ, ಕಲ್ಲಪ್ಪ ತಳವಾರ, ಪ್ರದೀಪ ದರೂರ, ಮಹಾದೇವ ತೇಗೂರ, ಶಿವಬಸು ತಳವಾರ ಉಪಸ್ಥಿತರಿದ್ದರು.