ಘಟಪ್ರಭಾ:ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿಯು ಪಾಲಕರ ಮತು ಶಿಕ್ಷಕರ ಮೇಲಿದೆ
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿಯು ಪಾಲಕರ ಮತು ಶಿಕ್ಷಕರ ಮೇಲಿದೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಫೆ 27 :
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿಯು ಪಾಲಕರ ಮತು ಶಿಕ್ಷಕರ ಮೇಲಿದೆ ಎಂದು ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಹಾಸ್ವಾಮಿಜಿ ಹೇಳಿದರು.
ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಮಹಾಕಾಳಿ ಶಿಕ್ಷಣ ಸಂಸ್ಥೆಯ ಶ್ರೀ ಸಿದ್ಧರಾಮೇಶ್ವರ ಆದರ್ಶ ಕನ್ನಡ ಹಿರಿಯ ಅನುದಾನಿತ ಪ್ರಾಥಮಿಕ ಶಾಲೆಯ 7ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ, ಸಚ್ಛಾರಿತ್ರ್ಯ ವಿದ್ಯಾರ್ಥಿಗಳ ಆಧಾರಸ್ಥಂಭವಾಗಿದ್ದು, ದೃಢ ಪ್ರಯತ್ನ, ಆತ್ಮವಿಶ್ವಾಸಗಳೇ ಯಶಸ್ಸಿನ ಸಾಧನೆಯಾಗಿದೆ. ಮಹಾಕಾಳಿ ಶಿಕ್ಷಣ ಸಂಸ್ಥೆಯ ಸಾಧನೆ ಆದರ್ಶಪ್ರಾಯವಾಗಿದೆ ಎಂದರು.
ಶ್ರೀ ವಿಠ್ಠಲ ದೇವರ ದೇವಋಷಿಗಳಾದ ಮುರೇಪ್ಪ ಪೂಜೇರಿ ಸಾನಿಧ್ಯ ವಹಿಸಿದ್ದರು. ಶಾಲೆಯ ಅಧ್ಯಕ್ಷ ಜ್ಯೋತ್ತೆಪ್ಪ ಬಂತಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾರುತಿ ಶಿರಗುರಿ, ಅಡಿವೆಪ್ಪ ಬೆಕ್ಕಿನವರ, ವಿಠ್ಠಲ ಪಾಟೀಲ, ರಾಮಪ್ಪ ಜೊತ್ತೇನ್ನವರ, ಪವಾಡೆಪ್ಪ ಲಗಳೇರ, ಪ್ರಧಾನ ಗುರು ಎಂ.ಆರ್.ಕಡಕೋಳ ಇದ್ದರು.