ಗೋಕಾಕ:ಸಚಿವರಾಗಿ ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ : ಅಭಿಮಾನಿಗಳಿಂದ ಸಂಭ್ರಮಾಚರಣೆ
ಸಚಿವರಾಗಿ ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ : ಅಭಿಮಾನಿಗಳಿಂದ ಸಂಭ್ರಮಾಚರಣೆ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಫೆ 6 :
ನೂತನವಾಗಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಿಮಿತ್ಯ ರಮೇಶ ಜಾರಕಿಹೊಳಿ ಅವರ ಅಭಿಮಾನಿ ಬಳಗದವರು ನಗರದಲ್ಲಿ ಗುರುವಾರದಂದು ವಿಜಯೋತ್ಸವ ಆಚರಿಸಿದರು,
ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ರಮೇಶ ಜಾರಕಿಹೊಳಿ ಅವರ ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ನಿಂಗಪ್ಪಾ ತೋಳಿನವರ , ಸಿದ್ದು ಪಾಟೀಲ , ಸಾದಿಕ ಹಲ್ಯಾಳ, ಅಬ್ಬಾಸ ದೇಸಾಯಿ, ಕೃಷ್ಣಾ ಖಾನಪ್ಪನವರ, ಪ್ರದೀಪ ನಾಗನೂರ, ಬಂಡು ಜರತಾರಕರ, ನಿತ್ಯಾನಂದ ಅಮಿನಬಾಂವಿ , ,ರಪೀಕ ಗುಳೆದಗುಡ್ಡ, ಶಿವಾನಂದ ಪೂಜೇರಿ , ಸುರೇಶ ಪತ್ತಾರ , ಟೋಪಿಚಂದಾ, ಜಾವೇದ ನಿಂಬರಗಿ , ಅಬ್ಬು ಮುಜಾವರ, ದುಂಡಪ್ಪೋ ನಂದಿ , ಯಲ್ಲಪ್ಪ ಧರ್ಮಟ್ಟಿ , ಬಸವರಾಜ ಹೂಲಿ ,ಗುಗ್ಗಳಿ , ಮೋಸಿನ ಸರ್ಕಾವಾಸ ಸೇರಿದಂತೆ ಇತರರು ಇದ್ದರು.