ಘಟಪ್ರಭಾ:ಎಸ್.ಎಫ್.ಸಿ ನಿಧಿ ಅನುದಾನದಡಿಯಲ್ಲಿ 2019-20 ನೇ ಸಾಲಿನ ಸೋಲಾರ್ ಬಲ್ಬ್‍ಗಳ ವಿತರಣೆ
ಎಸ್.ಎಫ್.ಸಿ ನಿಧಿ ಅನುದಾನದಡಿಯಲ್ಲಿ 2019-20 ನೇ ಸಾಲಿನ ಸೋಲಾರ್ ಬಲ್ಬ್‍ಗಳ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಜ 11 :
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ 10 ನೇ ವಾರ್ಡದಲ್ಲಿ ಎಸ್.ಸಿ ಜನಾಂಗ ಫಲಾನುಭವಿಗಳಿಗೆ ಎಸ್.ಎಫ್.ಸಿ ನಿಧಿ ಅನುದಾನದಡಿಯಲ್ಲಿ 2019-20 ನೇ ಸಾಲಿನ ಸೋಲಾರ್ ಬಲ್ಬ್‍ಗಳನ್ನು ಪ.ಪಂ ಸದಸ್ಯ ಸಲೀಮ ಎಚ್.ಕಬ್ಬೂರ ಶುಕ್ರವಾರದಂದು ವಿತರಿಸಿದರು.
ನಂತರ ಮಾತನಾಡಿದ ಅವರು ಎಸ್.ಸಿ ಜನಾಂಗದ ಫಲಾನುಭವಿಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರಲ್ಲದೇ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಸ್ಕರ ಮಕಾನದಾರ, ಮುನ್ನಾ ಪಾಚ್ಛಾಪೂರೆ, ಕೈಶು ಕಲಾಲ, ಹೈದರ ಮಕಾನದಾರ, ತಾರಮಾತಿ ಕದಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.