ಗೋಕಾಕ:ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದಕ್ಕಿಸಿಕೊಳ್ಳುವಲ್ಲಿ ಚಿದಾನಂದ ಮೂರ್ತಿ ಅವರ ಹೋರಾಟ ಮತ್ತು ಶ್ರಮ ಅಳಿಸಲಾಗದ್ದು : ಖಾನಪ್ಪನವರ
ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದಕ್ಕಿಸಿಕೊಳ್ಳುವಲ್ಲಿ ಚಿದಾನಂದ ಮೂರ್ತಿ ಅವರ ಹೋರಾಟ ಮತ್ತು ಶ್ರಮ ಅಳಿಸಲಾಗದ್ದು : ಖಾನಪ್ಪನವರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 11 :
ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದಕ್ಕಿಸಿಕೊಳ್ಳುವಲ್ಲಿ ಚಿದಾನಂದ ಮೂರ್ತಿ ಅವರ ಹೋರಾಟ ಮತ್ತು ಶ್ರಮ ಅಳಿಸಲಾಗದ್ದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಶನಿವಾರದಂದು ನಗರದ ಗುರುವಾರ ಪೇಠೆಯ ಕರವೇ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಗಲಿದ ಮಹಾನ ಸಾಹಿತಿ ದಿ. ಚಿಮೂ ಅವರ ಶ್ರದ್ದಾಂಜಲಿ ಕಾರ್ಯ ಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯದ ಬೆಳವಣಿಗೆ, ಹಂಪಿ ಸ್ಮಾರಕಗಳ ಸಂರಕ್ಷಣೆಗೆ, ಕನ್ನಡ ನೆಲ-ಜಲ ರಕ್ಷಣೆಗೆ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದ ಚಿಮೂ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.1982ರಲ್ಲಿ ಗೋಕಾಕ್ ವರದಿಯ ಜಾರಿಗೆ ಕನ್ನಡ ಸಾಹಿತಿಗಳು, ಕಲಾವಿದರು ಹೋರಾಟ ಹೂಡಿದರು. ಅದೇ ವರ್ಷದ ಎಪ್ರಿಲ್ 13ರಂದು ‘ಸಾಹಿತಿಗಳ ಕಲಾವಿದರ ಬಳಗ’ ಅಸ್ತಿತ್ವಕ್ಕೆ ಬಂತು. ಚಿದಾನಂದಮೂರ್ತಿಯವರು ಕನ್ನಡ ಚಳುವಳಿಯ ಹೊಸ ನಾಯಕರಾದರು. ಗೋಕಾಕ್ ಚಳುವಳಿಯಲ್ಲಿ ಮೂರ್ತಿಗಳು ತೋರಿದ ಕ್ರಿಯಾಶೀಲತೆ, ಹಿರಿಯರನ್ನು, ಕಿರಿಯರನ್ನು ಉತ್ಸಾಹಿಸಿ ತಮ್ಮೊಂದಿಗೆ ಕೊಂಡೊಯ್ದ ರೀತಿ, ಮೌನ ಮೆರವಣಿಗೆ, ಧರಣಿ, ನಿರಶನ ಸಮಾವೇಶಗಳನ್ನು ಏರ್ಪಡಿಸಿದ ವಿಧಾನ ಕನ್ನಡ ಚಳವಳಿಗೆ ಹೊಸ ರೂಪ ವರ್ಚಸ್ಸು, ಗೌರವಗಳನ್ನು ತಂದಿತ್ತವು. ಕನ್ನಡ ಚಳವಳಿಯ ಬಗ್ಗೆ ಜನಸಾಮಾನ್ಯರಲ್ಲಿದ್ದ ಕೀಳು ಮನೋಭಾವ ತೊಲಗಲೂ ಮೂರ್ತಿಗಳೇ ಕಾರಣರಾಗಿದ್ದರು ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಖಾನಪ್ಪನವರ ಸಂತಾಪ ಸೂಚಿಸಿದರು
ಈ ಸಂದರ್ಭದಲ್ಲಿ ಸಾದಿಕ ಹಲ್ಯಾಳ , ಕೃಷ್ಣಾ ಖಾನಪ್ಪನವರ , ಮುಗುಟ ಪೈಲವಾನ , ಅಂಬಾಸಾ ವಾಗುಲೆ, ಚಂದು ಸೊಲ್ಲಾಪೂರಮಠ , ಮಹಾಂತೇಶ ದಾಬಿಮಠ , ವಿರಣ್ಣಾ ಜಕಾತಿ , ಮಹಾದೇವ ಕಂಕಾಳಿ , ಮಲ್ಲು ಹೆಳ್ವಗೋಳ , ಸಿದ್ದಪ್ಪಾ ಕೋಲಕಾರ , ಪವನ ಆಶಿ , ಶಂಕರ ದೇಸಿಂಗೆ, ಮಂಜುನಾಥ ಖಾನಪ್ಪನವರ , ಆನಂದ ಬಿರಡಿ, ಶ್ಯಾಮಲಾ ಹುಬ್ಬಳ್ಳಿಕರ , ವಿದ್ಯಾ ದಾಬಿಮಠ , ಕಮಲಾ ದರ್ಶನ , ಗೌರವ್ವಾ ಇದ್ದರು
