ಗೋಕಾಕ:ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಗೋಕಾಕನ ಸಂದೀಪ್ ಶಂಕರ ಕಡಿ ಆಯ್ಕೆ
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಗೋಕಾಕನ ಸಂದೀಪ್ ಶಂಕರ ಕಡಿ ಆಯ್ಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 7 :
ಜನೇವರಿ 20 ರಂದು ನವದೆಹಲಿಯಲ್ಲಿ ನಡೆಯುವ ಪ್ರಧಾನಿ ಮೋದಿ ಅವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಗೋಕಾಕ ವಲಯದ ಖನಗಾಂವ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯ ಆರ್.ಎಮ್.ಎಸ್.ಎ. ನ 9ನೇ ತರಗತಿ ವಿದ್ಯಾರ್ಥಿ ಕುಮಾರ ಸಂದೀಪ ಶಂಕರ ಕಡಿ ಆಯ್ಕೆಯಾಗಿದ್ದಾನೆ .
ಇತನ ಆಯ್ಕೆಗೆ ಶಾಸಕ ರಮೇಶ ಜಾರಕಿಹೊಳಿ, ಡಿಡಿಪಿಐ ಮೋಹನಕುಮಾರ ಹಂಚಾಟೆ , ಗೋಕಾಕ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ಮುಖ್ಯೋಪಾಧ್ಯಾಯ ವಾಯ್ ಹೆಚ್ ಭಜಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ
ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿದ್ಯಾರ್ಥಿ ಸಂದೀಫ ಕಡಿ ಜನೇವರಿ 15 ರಂದು ಬೆಂಗಳೂರು ಮಾರ್ಗವಾಗಿ ದೆಹಲಿಗೆ ಪ್ರಯಾಣ ಬೆಳಸಲ್ಲಿದ್ದಾನೆ. ರಾಜ್ಯದಲ್ಲಿ ಒಟ್ಟು ಮೂವತ್ತು ವಿದ್ಯಾರ್ಥಿಗಳು ಪ್ರಧಾನಿ ಜೋತೆ ಪರೀಕ್ಷಾ ಫೇ ಚರ್ಚಾ ಕಾರ್ಯಕ್ರಮ ಕ್ಕೆ ಆಯ್ಕೆಯಾಗಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಗೋಕಾಕ ವಲಯದ ವಿದ್ಯಾರ್ಥಿ ಸಂದೀಪ್ ಕಡಿ ಆಯ್ಕೆಯಾಗಿದ್ದಾನೆ ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಪತ್ರಿಕೆಗೆ ತಿಳಿಸಿದ್ದಾರೆ.