ಗೋಕಾಕ:ಶತ್ರುಗಳಲ್ಲಿ ಮಿತ್ರತ್ವವನ್ನು ಕಂಡ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ : ಎಸ್.ವಿ.ದೇಮಶೆಟ್ಟಿ
ಶತ್ರುಗಳಲ್ಲಿ ಮಿತ್ರತ್ವವನ್ನು ಕಂಡ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ : ಎಸ್.ವಿ.ದೇಮಶೆಟ್ಟಿ
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಡಿ 25 :
ದೇಶ ಕಂಡ ಅಪ್ರತಿಮ ನಾಯಕರಲ್ಲಿ ಅಗ್ರಗಣ್ಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತ ಶತ್ರುವಾಗಿ ಶತ್ರುಗಳಲ್ಲಿ ಮಿತ್ರತ್ವವನ್ನು ಕಂಡ ಧೀಮಂತ ನಾಯಕರಾಗಿದ್ದರು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ಹೇಳಿದರು.
ಬುಧವಾರದಂದು ನಗರದ ಶಾಸಕರ ಕಾರ್ಯಾಲಯದಲ್ಲಿ ಬಿಜೆಪಿ ನಗರ ಘಟಕದ ನೇತ್ರತ್ವದಲ್ಲಿ ಹಮ್ಮಿಕೊಂಡ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ರಾಜಕೀಯದಲ್ಲಿ ನೈತಿಕತೆಗೆ ಹೆಚ್ಚಿನ ಮಹತ್ವ ನೀಡಿ ಅಟಲ್‍ಜೀ ಅವರು ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದರು. ಪ್ರಧಾನಿಯಾಗಿ ಹಲವಾರು ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸಿ ಬಲಿಷ್ಠ ಭಾರತ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ನದಿ ಜೋಡನೆ ಅವರ ಮಹತ್ವಾಂಕ್ಷೆಯ ಯೋಜನೆಯಾಗಿತ್ತು. ಅವರ ಮಾರ್ಗದರ್ಶನದಲ್ಲಿಯೇ ನಾವೆಲ್ಲ ನಡೆದು ಪಕ್ಷವನ್ನು ಬಲ ಪಡಿಸಲು ಶ್ರಮಿಸೋಣವೆಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಂಬಿರಾವ ಪಾಟೀಲ, ಡಾ. ಜಿ.ಆರ್.ಸೂರ್ಯವಂಶಿ, ಸತ್ಯನಾರಾಯಣ ಝಂವರ, ಬಸವರಾಜ ಹುಳ್ಳೇರ, ವಾಸುದೇವ ಸವತಿಕಾಯಿ, ಶಕೀಲ ಧಾರವಾಡಕರ, ಲಕ್ಕಪ್ಪ ತಹಶೀಲದಾರ, ಲಕ್ಷ್ಮಣ ತಳ್ಳಿ, ಶಾಮಾನಂದ ಪೂಜೇರಿ, ರವಿ ಪತ್ರಾವಳಿ, ಕುಸುಮಾ ಖನಗಾಂವಿ, ಶ್ರೀದೇವಿ ತಡಕೋಡ ಸೇರಿದಂತೆ ಅನೇಕರು ಇದ್ದರು.