RNI NO. KARKAN/2006/27779|Saturday, February 14, 2026
You are here: Home » breaking news » ಬೆಳಗಾವಿ:ಲಖನ ಜಾರಕಿಹೊಳಿ ಇಂದಿನಿಂದ ನಮ್ಮ ತಮ್ಮ : ರಮೇಶ ಕುಮಾರ ತೀರ್ಪಿಗೆ ಜನತೆ ಉತ್ತರ ನೀಡಿದ್ದಾರೆ : ನೂತನ ಶಾಸಕ ರಮೇಶ ಜಾರಕಿಹೊಳಿ

ಬೆಳಗಾವಿ:ಲಖನ ಜಾರಕಿಹೊಳಿ ಇಂದಿನಿಂದ ನಮ್ಮ ತಮ್ಮ : ರಮೇಶ ಕುಮಾರ ತೀರ್ಪಿಗೆ ಜನತೆ ಉತ್ತರ ನೀಡಿದ್ದಾರೆ : ನೂತನ ಶಾಸಕ ರಮೇಶ ಜಾರಕಿಹೊಳಿ 

ಲಖನ ಜಾರಕಿಹೊಳಿ ಇಂದಿನಿಂದ ನಮ್ಮ ತಮ್ಮ : ರಮೇಶ ಕುಮಾರ ತೀರ್ಪಿಗೆ ಜನತೆ ಉತ್ತರ ನೀಡಿದ್ದಾರೆ : ನೂತನ ಶಾಸಕ ರಮೇಶ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಡಿ 9 :

 

ಇಂದಿಗೆ ಚುನಾವಣೆ ಮುಗಿದಿದೆ ಇಂದಿನಿಂದ ಲಖನ್ ಜಾರಕಿಹೊಳಿ ನಮ್ಮ ತಮ್ಮ ದೇವರು ಅವನಿಗೆ ಒಳ್ಳೆಯ ಬುದ್ದಿ ಕೋಡಲಿ ಎಂದು ನೂತನ ಶಾಸಕ ರಮೇಶ ಜಾರಕಿಹೊಳಿ ಹೇಳಿದರು

ತಮ್ಮ ಗೆಲುವು ಅಧಿಕೃತವಾಗುತ್ತಿದ್ದಂತೆ ಚುನಾವಣಾಧಿಕಾರಿಗಳಿಂದ ಪ್ರಮಾಣ ಪ್ರತ ಪಡೆದು ಮಾಧ್ಯಮ ಮೀತ್ರರೊಂದಿಗೆ ಮಾತನಾಡಿದ ಅವರು ನಾನು ಭ್ರಷ್ಟಾಚಾರ ಮಾಡಿದ್ಧೇನೆಂದು ಸಹೋದರ ಲಖನ್ ಆರೋಪ ಮಾಡಿದ್ದಾರೆ ಭ್ರಷ್ಟಾಚಾರ ಸಾಬೀತಾದರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದಲು ಸಿದ್ದ ಎಂದ ರಮೇಶ ಜಾರಕಿಹೊಳಿ ಮಾಜಿ ಸ್ಪೀಕರ್ ರಮೇಶ ಕುಮಾರ ಅವರು ಅವೈಜ್ಞಾನಿಕವಾಗಿ ನಮ್ಮ ವಿರುದ್ಧ ತೀರ್ಪು ನೀಡಿ ನಮ್ಮನ್ನು ಅನರ್ಹ ಮಾಡಿದ್ದರು ಆದರೆ ಜನರು ನಮಗೆ ನ್ಯಾಯವನ್ನು ನೀಡಿದ್ದಾರೆ . ಇದರಿಂದ ರಮೇಶ ಕುಮಾರ ತೀರ್ಪು ಅಸಂವಿಧಾನಿಕ ಎಂದು ಜನರು ಸಾಬೀತು ಪಡೆಸಿದ್ಧಾರೆಂದು ಹೇಳಿದರು
ಲಕ್ಷ್ಮೀ ಹೆಬ್ಬಾಳ್ಕರ ಅವರಿಂದ ಕಾಂಗ್ರೆಸ್ ಪಕ್ಷ ಹಾಳಾಗಿದೆ ಎಂದು ಇದೇ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದರು

Related posts: