RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಜನಪ್ರತಿನಿಧಿಗಳಾದವರು ಜನರು ಕಷ್ಟದಲ್ಲಿದ್ದಾಗ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು : ಶಾಸಕ ಸತೀಶ ಜಾರಕಿಹೊಳಿ

ಗೋಕಾಕ:ಜನಪ್ರತಿನಿಧಿಗಳಾದವರು ಜನರು ಕಷ್ಟದಲ್ಲಿದ್ದಾಗ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು : ಶಾಸಕ ಸತೀಶ ಜಾರಕಿಹೊಳಿ 

ಜನಪ್ರತಿನಿಧಿಗಳಾದವರು ಜನರು ಕಷ್ಟದಲ್ಲಿದ್ದಾಗ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು : ಶಾಸಕ ಸತೀಶ ಜಾರಕಿಹೊಳಿ  

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 30 :

 

 
ಜನಪ್ರತಿನಿಧಿಗಳಾದವರು ಜನರು ಕಷ್ಟದಲ್ಲಿದ್ದಾಗ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಕೇವಲ ಚುನಾವಣೆ ಬಂದಾಗ ಮಾತ್ರ ಜನತೆ ಹತ್ತಿರ ಬರುವುದು ಸರಿಯಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರದಂದು ನಗರದ ಉಪ್ಪಾರಗಲ್ಲಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಮತಯಾಚಿಸಿ ಮಾತನಾಡಿದ ಅವರು, ಅಂತಹ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದ್ದು, ಇದಕ್ಕೆ ತಾವು ಗಟ್ಟಿಯಾಗಿ ನಿಂತು ಕಾಂಗ್ರೇಸ್ ಅಭ್ಯರ್ಥಿಗೆ ಮತವನ್ನು ನೀಡಿ ನಗರದ ಅಭಿವೃದ್ದಿಗೆ ಸಹಕಾರ ನೀಡುವಂತೆ ಮತದಾರರಲ್ಲಿ ಕೋರಿದರು.
ಕಳೆದ 20 ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ಇದ್ದು, ಈಗ ಆಸೆ-ಆಮಿಷಗಳಿಗೆ ಬಲಿಯಾಗಿ ಪಕ್ಷ ಹಾಗೂ ಇಲ್ಲಿಯ ಜನತೆಗೆ ಮೋಸ ಮಾಡಿದ್ದಾರೆ. ಅಲ್ಲದೇ 20 ವರ್ಷಗಳಿಂದ ಬಡಜನರಿಗೆ ಒಂದು ಮನೆಯನ್ನು ಕಟ್ಟಿಸಿಕೊಡಲಿಲ್ಲ, ಈಗ ಮತ್ತೆ ಸುಳ್ಳು ಭರವಸೆಗಳನ್ನು ನೀಡಲು ಬಂದಿದ್ದಾರೆ. ಅವರ ಮಾತಿಗೆ ಮರುಳಾಗಬೇಡಿ, ಇಲ್ಲಿಯ ನಗರಸಭೆ ಹಾಗೂ ಶಾಸಕರ ಅವ್ಯವಸ್ಥೆ ಹಾಗೂ ಶಾಸಕರ ಬಗ್ಗೆ ಹೇಳುವುದಾರೆ ಇಡೀ ದಿನವೇ ಬೇಕು. ಅದಕ್ಕಾಗಿ ಇದೊಂದು ಸುವರ್ಣ ಅವಕಾಶವಾಗಿದ್ದು ತಾವು ಶಾಸಕರನ್ನು ಬದಲಿಸುವ ಮೂಲಕ ಇಡೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದರು.
ಇಲ್ಲಿಯ ಜನತೆ ಪ್ರವಾಹದ ಸಂಕಷ್ಟದಲ್ಲಿದಾಗ ಶಾಸಕರು ತಮ್ಮ ರಾಜಕೀಯ ಬೆಳೆಯನ್ನು ಬೆಳೆಸಿಕೊಳ್ಳಲು ಮುಂಬಯಿ, ಬೆಂಗಳೂರು, ದಿಲ್ಲಿಯಲ್ಲಿ ಇದ್ದರು, ತಮ್ಮ ಸ್ವಾರ್ಥದ ರಾಜಕೀಯ ಜೀವನದಲ್ಲಿ ಅಭಿವೃದ್ದಿಯಾಗಲು ಇಲ್ಲಿಯ ಜನತೆ ನಂಬಿಕೆಯನ್ನು ಬಲಿಕೊಟ್ಟಿದ್ದಾರೆ. ಗೋಕಾಕ ಮತಕ್ಷೇತ್ರದ ಚುನಾವಣೆಯನ್ನು ಇಡೀ ರಾಷ್ಟ್ರವೇ ಗಮನಿಸುತ್ತಿದೆ, ಪಕ್ಷಾಂತರಿಗಳಿಗೆ ಸೋಲಿಸಲು ಇಲ್ಲಿಯ ಪ್ರಬುದ್ಧ ಮತದಾರರು ಎಂತಹ ಕಷ್ಟಗಳು ಬಂದರು ಎದುರಿಸಬೇಕು. ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದ ಡಿ-5 ರಂದು ಮತಗಳನ್ನು ಕಾಂಗ್ರೇಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರಿಗೆ ಮತವನ್ನು ಚಲಾಯಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಭಗವಂತ ಹುಳ್ಳಿ, ಲಕ್ಷ್ಮಣ ಬಬಲಿ, ಕಲ್ಲೋಳೆಪ್ಪ ತಾಶೀಲದಾರ, ರಮೇಶ ಕಲಾಲ, ಚಂದ್ರಕಾಂತ ಕಾತಿ, ದಸ್ತಗೀರಸಾಬ ಶಬಾಶಖಾನ ಸೇರಿದಂತೆ ಅನೇಕರು ಇದ್ದರು.

Related posts: