RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಗೋಕಾಕ ಜನರ ನೆಮ್ಮದಿ ಕೆಡೆಸಿದ ಬಂಡೆ ಕುಸಿತ : ಭಯದಲ್ಲಿ ಸಾರ್ವಜನಿಕರು

ಗೋಕಾಕ:ಗೋಕಾಕ ಜನರ ನೆಮ್ಮದಿ ಕೆಡೆಸಿದ ಬಂಡೆ ಕುಸಿತ : ಭಯದಲ್ಲಿ ಸಾರ್ವಜನಿಕರು 

ಗೋಕಾಕ ಜನರ ನೆಮ್ಮದಿ ಕೆಡೆಸಿದ ಬಂಡೆ ಕುಸಿತ : ಭಯದಲ್ಲಿ ಸಾರ್ವಜನಿಕರು

 

ನಮ್ಮ ಬೆಳಗಾವಿ ಇ – ವಾರ್ತೆ, ವಿಶೇಷ
ಗೋಕಾಕ ಅ 22 :
ಮೂರನಾಲ್ಕು ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಗೋಕಾಕ ನಗರದ ಮಲ್ಲಿಕಜಾನ/ ಮಲ್ಲಿಕಾರ್ಜುನ ಗುಡ್ಡದ ಮೇಲಿನ ಅತ್ಯಂತ ಹಳೆಯ ಬಂಡೆಕಲ್ಲುಗಳು ಕುಸಿಯುವ ಭೀತಿಯಿಂದ ಸಾರ್ವಜನಿಕರು ಆತಂಕದ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ.

ಕಳೆದ ಎರೆಡು ತಿಂಗಳ ಹಿಂದೆ ಕರದಂಟು ನಾಡು ಗೋಕಾಕ ಹಿಂದೆಂದು ಕಂಡು ಕಾಣದ ಜಲಪ್ರಳಯಕ್ಕೆ ನಲುಗಿಹೋಗಿ ಇನ್ನೂ ಜನ ಜೀವನ ಸಹಜ ಸ್ಥಿತಿಗೆ ಬರಲು ಹಾತೊರೆಯುತ್ತಿರುವ ಈ ಸಂದರ್ಭದಲ್ಲಿ ಗುಡ್ಡದ ಮೇಲಿನ ಬಂಡೆಕಲ್ಲುಗಳು ಕುಸಿಯುವ ಹಂತದಲ್ಲಿರುವದರಿಂದ ಗುಡ್ಡದ ಮೇಲೆ ವಾಸಿವಾಗಿರುವ ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಆತಂಕದ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ

ಶುಕ್ರವಾರದಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಗುಡ್ಡದ ಮೇಲಿರುವ ಬೃಹದಾಕಾರದ ಬಂಡೆಕಲ್ಲೊಂದು 5 ಅಡಿ ಎಷ್ಟು ಕುಸಿದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ ಇದರಿಂದ ಭಯಭೀತರಾಗಿರುವ ಜನರು ಬಂಡೆಕಲ್ಲು ತೆರವುವಿಗೆ ಜನಪ್ರತಿನಿಧಿಗಳ ಮೋರೆ ಹೋಗಿದ್ದಾರೆ
ನಗರದ ವಾರ್ಡ ನಂ 21,22,23,30 ಮತ್ತು 31 ಹದಿಯಲ್ಲಿ ಬರುವ ಮಲ್ಲಿಕಾರ್ಜುನ/ ಮಲ್ಲಿಕಸಾಬ ಗುಡ್ಡದಲ್ಲಿ ಸುಮಾರು 3 ದಶಕಗಳಿಂದ ಹೆಚ್ಚಿನ ಕಾಲದಿಂದಲೂ ಆಶ್ರಯ ಪಡೆದಿರುವ ಸಾರ್ವಜನಿಕರು ಯಾವುದೆ ಭಯ , ಆತಂಕವಿಲ್ಲದೆ ಜೀವನವನ್ನು ಸಾಗಿಸುತ್ತಿದ್ದರು ಆದರೆ ಮೊನ್ನೆಯಿಂದ ಸತತ ಸುರಿಯುತ್ತಿರುವ ಮಳೆಯಿಂದ ಬಂಡೆಕಲ್ಲು ಕುಸಿದ ಪರಿಣಾಮ ಸಾರ್ವಜನಿಕರು ಭಯಭೀತರಾಗಿದ್ದಾರೆ.
ಬಂಡೆಕಲ್ಲು ತೆರವುವಿಗೆ ಶಾಸಕ ಸತೀಶ ಜಾರಕಿಹೊಳಿ ಸಹಾಯ ಹಸ್ತ : ಸತತ ಸುರಿಯುತ್ತಿರುವ ಮಳೆಯಿಂದ ನಗರದ ಗುಡ್ಡದ ಮೇಲೆ ಸರಿದ ಬಂಡೆಕಲ್ಲು ತೆರವುವಿಗೆ ಶಾಸಕ ಸತೀಶ ಜಾರಕಿಹೊಳಿ ಅವರು ಮುಂದಾಗಿದ್ದು, ತಮ್ಮ ಗ್ರ್ಯಾನೆಟ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಳಕಲ್, ತಮಿಳುನಾಡು ಮತ್ತು ರಾಜಸ್ಥಾನ ಬಂಡೆತೆರವು ಗೋಳಿಸುವ ನುರಿತ ತಂಡವನ್ನು ಸ್ಥಳಕ್ಕೆ ಕಳುಹಿಸಿ ಅದಕ್ಕೆ ಬೇಕಾಗುವ ಎಲ್ಲ ಸಲಕರಣೆಗಳನ್ನು ನೀಡಿ ತಮ್ಮ ಸ್ವಂತ ಖರ್ಚಿನಲ್ಲಿ ಬಂಡೆಕಲ್ಲು ತೆರುವಿಗೆ ತಾಲೂಕಾಡಳಿತಕ್ಕೆ ಸಾಥ್ ನೀಡಿದ್ದಾರೆ.

ಸುರಕ್ಷಿತ ಕ್ರಮಕ್ಕೆ ಸಾರ್ವಜನಿಕರ ಆಗ್ರಹ : ಸುಮಾರು 3 ದಶಕಗಳಿಂದ ಹೆಚ್ಚಿನ ಕಾಲದಿಂದಲೂ ಗುಡ್ಡದ ಮೇಲೆ ಆಶ್ರಯ ಪಡೆದಿರುವ ಸಾರ್ವಜನಿಕರು ಬಂಡೆ ಕುಸಿತದಿಂದ ಆತಂಕಗೊಂಡಿದ್ದು ,ಬಂಡೆಕಲ್ಲುನ್ನು ಸುರಕ್ಷಿತವಾಗಿ ತೆರವುಗೊಳಿಸಿ ಮುಂದೆ ಹೀಗೆ ಆಗದಂತೆ ಮುಂಜಾಗ್ರತವಾಗಿ ಸುರಕ್ಷಿತ ಕ್ರಮವನ್ನು ಕೈಗೋಳಬೇಕೆಂದು ಜನಪ್ರತಿನಿಧಿಗಳಿಗೆ ಮತ್ತು ತಾಲೂಡಳಿತವನ್ನು ಒತ್ತಾಯಿಸುತ್ತಿದ್ದಾರೆ

ಎನ್ ಡಿ ಆರ್ ಎಫ್ ತಂಡ ಆಗಮನ : ಕಳೆದ ಎರೆಡು ತಿಂಗಳ ಹಿಂದೆ ಗೋಕಾಕ ನಗರಕ್ಕೆ ಎರಗಿದ್ದ ಜಲ ಪ್ರಳಯದ ಸಂದರ್ಭದಲ್ಲಿ ತನ್ನ ಜೀವದ ಹಂಗೂ ತೊರೆದು ಪ್ರವಾಹದಲ್ಲಿ ಸಿಲುಕ್ಕಿದ ನೂರಾರು ಜನರನ್ನು ರಕ್ಷಿಸಿ ಸೈ ಅನಿಸಿಕೊಂಡಿದ್ದ ಕೇಂದ್ರದ ವಿಪತ್ತು ನಿರ್ವಹಣಾ ತಂಡ (ಎನ್ ಡಿ ಆರ್ ಎಫ್) ಇಗಾಗಲೇ ನಗರಕ್ಕೆ ಆಗಮಿಸಿದ್ದು , ಬಂಡೆ ಕುಸಿತ ಸ್ಥಳಕ್ಕೆ ಭೇಟಿ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.ಎನಾ .ಡಿ ಆರ್.ಎಫ್ 5 ಪುಣೆ ತಂಡದ ಮುಖ್ಯಸ್ಥ ಬಿ. ಎಸ್ ಪ್ರಸಾದರಾವ್ ಅವರ ನೇತೃತ್ವದಲ್ಲಿ 24 ಜನರ ತಂಡ ಬಂಡೆತೆರವು ಕಾರ್ಯಚರಣೆಯಲ್ಲಿ ಭಾಗಿಯಾಗಲಿದ್ದು , ಶಾಸಕ ಸತೀಶ ಜಾರಕಿಹೊಳಿ ಬಂಡೆತೆರವು ನೂರಿತರಿಗೆ ಸೂಕ್ತ ಮತ್ತು ಸುರಕ್ಷಿತ ಮಾರ್ಗದರ್ಶನ ನೀಡಲಿದೆ. ಇಗಾಗಲೇ ಸ್ಥಳದಲ್ಲಿ ಸತೀಶ ಜಾರಕಿಹೊಳಿ ಅವರ ತಂಡ ಎಲ್ಲ ಅಗತ್ಯ ಸಲಕರಣೆಗಳನ್ನು ತೆಗೆದುಕೊಂಡು ಹೋಗಿ ಬಂಡೆಕಲ್ಲು ತೆರವುಗೊಳಿಸುವ ಎಲ್ಲ ಪೂರಕ ಕ್ರಮಗಳನ್ನು ತೆಗೆದುಕೊಂಡಿದೆ.

ಕಾರ್ಯಾಚರಣೆಗೆ ಮಳೆ ಅಡ್ಡಿ : ಮಂಗಳವಾರ ಮುಂಜಾನೆಯಿಂದಲೇ ಕುಸಿದ ಬಂಡೆಕಲ್ಲು ತೆರುವಿಗೆ ಮುಂದಾಗಿರುವ ತಾಲೂಕಾಡಳಿತ, ಎನ್ .ಡಿ ಆರ್.ಎಫ್ ಮತ್ತು ಸತೀಶ ಜಾರಕಿಹೊಳಿ ಅವರ ತಂಡದ ಕಾರ್ಯಚರಣೆಗೆ ಸತತ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ.ಕಾರ್ಯಚರಣೆಗೆ ಬೃಹದಾಕಾರದ ಜೆಸಿಬಿಯೊಂದು ಗುಡ್ಡದಲ್ಲಿ ರಸ್ತೆ ಮಾಡುತ್ತಾ ಬಂಡೆಕಲ್ಲು ಹತ್ತಿರ ತಲುಪಿದ್ದು , ಕಾಂಪ್ರೆಸರ ಮಶೀನ್ ಸೇರಿದಂತೆ ಅಗತ್ಯ ವಸ್ತುಗಳನ್ನು ಕಾರ್ಯಚರಣೆ ನಡೆಯುವ ಸ್ಛಳದಲ್ಲಿ ತಲುಪಿಸಲಾಗಿದ್ದು ಬುಧವಾರದಂದು ಕಾರ್ಯಚರಣೆ ಪ್ರಾರಂಭವಾಗಲಿದೆ

ಒಟ್ಟಾರೆ ಜಲಪ್ರಳಯದಿಂದ ಈಗಷ್ಟೇ ಸುಧಾರಿಸಿ ಕೋಳ್ಳುತ್ತಿರುವ ಗೋಕಾಕ ನಗರಕ್ಕೆ ಬಂಡೆಕಲ್ಲುಗಳ ಕಾಟ್ ಶೂರುವಾಗಿದ್ದು, ಮುಂಜಾಗೃತ ಕ್ರಮವಾಗಿ ತಾಲೂಕಾಡಳಿತ ಸುರಕ್ಷಿತ ಕ್ರಮವನು ಕೈಗೊಂಡು ಗುಡ್ಡದ ಮೇಲೆ ವಾಸವಾಗಿರುವ ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬಬೇಕಾಗಿದೆ.

 

“ಕುಸಿದ ಬಂಡೆಕಲ್ಲು ತೆರುವಿಗೆ ಈಗಾಗಲೇ ಎನ್ .ಡಿ. ಆರ್.ಎಫ್ ತಂಡ ಮತ್ತು ತಾಂತ್ರಿಕ ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಮುಂಜಾನೆಯಿಂದ ಸುರಕ್ಷಿತವಾಗಿ ಬಂಡೆಕಲ್ಲು ತೆರವುಗೊಳಿಸುವ ಕಾರ್ಯಚರಣೆ ನಡೆಸಲಾಗುವದು”
― ಪ್ರಕಾಶ ಹೋಳೆಪ್ಪಗೋಳ ತಹಶೀಲ್ದಾರ್ ಗೋಕಾಕ

 

“ಶಾಸಕ ಸತೀಶ ಜಾರಕಿಹೊಳಿ ಮತ್ತು ಲಖನ ಜಾರಕಿಹೊಳಿ ಅವರ ಮಾರ್ಗದರ್ಶನ ಮತ್ತು ಸಹರಕಾರದಿಂದ ಈಗಾಗಲೇ ಇಳಕಲ್, ರಾಜಸ್ಥಾನ ಮತ್ತು ತಮಿಳನಾಡಿನಿಂದ ಬಂಡೆಕಲ್ಲು ತೆರುವು ಗೋಳಿಸುವವರನ್ನು ಕರೆಸಲಾಗಿದ್ದು, ಎಲ್ಲ ಸಲಕರಣೆಗಳನ್ನು ಕಾರ್ಯಚರಣೆ ಸ್ಥಳಕ್ಕೆ ತಲುಪಿಸಲಾಗಿದೆ. ತಾಲೂಕಾಡಳಿತದ ಸೂಚನೆ ನಂತರ ಬಂಡೆಕಲ್ಲು ತೆರುವು ಕಾರ್ಯಚರಣೆ ಪ್ರಾರಂಭಿಸಲಾಗುವದು”
― ಆರೀಫ ಪೀರಜಾದೆ. ಸತೀಶ ಜಾರಕಿಹೊಳಿ ಪೌಂಡೇಶನ್ ಸದಸ್ಯ ಗೋಕಾಕ

Related posts: