RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀ ಶಾಂತಾನಂದ ಭಾರತಿ ಮಹಾಸ್ವಾಮಿಗಳು

ಗೋಕಾಕ:ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀ ಶಾಂತಾನಂದ ಭಾರತಿ ಮಹಾಸ್ವಾಮಿಗಳು 

ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀ ಶಾಂತಾನಂದ ಭಾರತಿ ಮಹಾಸ್ವಾಮಿಗಳು

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಸೆ 17 :

 

 
ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ. ದೇವಶಿಲ್ಪಿ ವಿಶ್ವಕರ್ಮನು ಬ್ರಹ್ಮಾಂಡದ ಪ್ರಥಮ ವಾಸ್ತುಶಾಸ್ತ್ರ ಶಿಲ್ಪಾಚಾರ್ಯವಾಗಿದ್ದಾನೆಂದು ಭೋಜರಾಜನು ಗೌರವಿಸಿದ ಐತಿಹ್ಯಗಳಿವೆ ಎಂದು ತುಕ್ಕಾನಟ್ಟಿಯ ಅಮೋಘ ಸಿದ್ದೇಶ್ವರ ಮಠದ ಗಾಯತ್ರಿ ಪೀಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಶಾಂತಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.
ಮಂಗಳವಾರದಂದು ತಾಲೂಕಿನ ಮಮದಾಪೂರ ಗ್ರಾಮದೇವಿ ದ್ಯಾಮವ್ವದೇವಿ ದೇವಾಲಯದಲ್ಲಿ ವಿಶ್ವಕರ್ಮ ಸಮುದಾಯದವರ ಸಹಯೋಗದಲ್ಲಿ ನಡೆದ ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ವಿಶ್ವಕರ್ಮ ಒಬ್ಬ ದೇವಶಿಲ್ಪಿಯಾಗಿದ್ದಾನೆ. ಬ್ರಹ್ಮಾಂಡ ತುಂಬೆಲ್ಲಾ ವ್ಯಾಪಿಸಿದ್ದಾನೆ ಅವರ ಆದರ್ಶಗಳನ್ನು ಪಾಲಿಸಿ ಜಗತ್ತಿಗೆ ವಿಶ್ವಕರ್ಮರ ಸಂದೇಶಗಳನ್ನು ಹರಡಿಸಲು ಸಮಾಜ ಭಾಂಧವರು ಕ್ರೀಯಾಶೀಲರಾಗಬೇಕು ಎಂದು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಶಾಂತಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು

ಸ್ಥಳೀಯ ಬಸವನಗರದ ಶ್ರೀ ಶಾಂತಾರೂಡ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು ಕಾರ್ಯಕ್ರಮಕ್ಕೂ ಮೊದಲು ವಿಶ್ವಕರ್ಮರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು
‌ಅಖಿಲ ಕರ್ನಾಟಕ ವಿಶ್ವಕರ್ಮ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸುರೇಶ ಪತ್ತಾರ , ಈರಪ್ಪ ಪತ್ತಾರ, ಅನಿಲ ಬಡಿಗೇರ, ಶ್ರೀಶೈಪ್ಪ ಕಂಬಾರ, ಈರಪ್ಪ ಬಡಿಗೇರ, ದೇವೇಂದ್ರಪ್ಪ ಪತ್ತಾರ , ಬಸವರಾಜ ಪತ್ತಾರ,ಬಾಬು ಪತ್ತಾರ, ವಸಂತ ಪತ್ತಾರ, ನಾರಾಯಣ ಬಡಿಗೇರ, ದೇವೇಂದ್ರ ಬಡಿಗೇರ, ಗೋಪಾಲ ಕಂಬಾರ,ಶಂಕರಗೌಡ ಪಾಟೀಲ , ಮಹಾದೇವಪ್ಪ ಕಂಬಾರ , ಬಾಳಪ್ಪ ಗಾಣಗಿ,ಬಸವರಾಜ ಹೂಗಾರ,ಈರಯ್ಯ ಹಿರೇಮಠ ,ರುದ್ರಪ್ಪ ಕಂಬಾರ, ಕಾಡಪ್ಪ ಕಂಬಾರ ಸೇರಿದಂತೆ ವಿಶ್ವಕರ್ಮ ಸಮುದಾಯದ ಹಿರಿಯ ಮುಖಂಡರು, ಯುವಕರು, ಗ್ರಾಮಸ್ಥರು, ಇತರರು ಇದ್ದರು.
ರಾಜು ಪತ್ತಾರ ಸ್ವಾಗಿಸಿದರು, ವೀರನಾಯ್ಕ ನಾಯ್ಕರ ಕಾರ್ಯಕ್ರಮ ಈರಯ್ಯ ಸ್ವಾಮಿಗಳು ನಿರೂಪಿಸಿ ವಂದಿಸಿದರು .

Related posts: