RNI NO. KARKAN/2006/27779|Thursday, October 16, 2025
You are here: Home » breaking news » ಬೆಳಗಾವಿ:ದಿ.ಹಿರೇಹಾಳ ಇಬ್ರಾಹಿಂ ಸಾಹೇಬರ ಆದರ್ಶ ಎಲ್ಲರಿಗೂ ಮಾದರಿ : ಜಿಲ್ಲಾಧ್ಯಕ್ಷ ನಜೀರಹ್ಮದ ಶೇಖ

ಬೆಳಗಾವಿ:ದಿ.ಹಿರೇಹಾಳ ಇಬ್ರಾಹಿಂ ಸಾಹೇಬರ ಆದರ್ಶ ಎಲ್ಲರಿಗೂ ಮಾದರಿ : ಜಿಲ್ಲಾಧ್ಯಕ್ಷ ನಜೀರಹ್ಮದ ಶೇಖ 

ದಿ.ಹಿರೇಹಾಳ ಇಬ್ರಾಹಿಂ ಸಾಹೇಬರ ಆದರ್ಶ ಎಲ್ಲರಿಗೂ ಮಾದರಿ : ಜಿಲ್ಲಾಧ್ಯಕ್ಷ ನಜೀರಹ್ಮದ ಶೇಖ

 

 
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಸೆ 16 :

 

 

ಅಲ್ಪಸಂಖ್ಯಾತರಲ್ಲೆ ಅಲ್ಪಸಂಖ್ಯಾತರಾದ ನದಾಫ್, ಪಿಂಜಾರ ಸಮಾಜವನ್ನು ಒಗ್ಗೂಡಿಸಿ, ಸಮಾಜದವರು ಉನ್ನತ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಟ್ಟ ದಿ.ಹಿರೇಹಾಳ ಇಬ್ರಾಹಿಂ ಸಾಹೇಬರ ಆದರ್ಶ ಎಲ್ಲರಿಗೂ ಮಾದರಿ ಎಂದು ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ನಜೀರಹ್ಮದ ಶೇಖ ಹೇಳಿದರು.
ಅವರು, ರವಿವಾರದಂದು ನಗರದ ಖಾಸಗಿ ಹೋಟೆಲೊಂದರಲ್ಲಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ಬೆಳಗಾವಿ ವಿಭಾಗ ಮಟ್ಟದ ಕಾರ್ಯಾಗಾರ ಮತ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಮಾಜದವರು ಉನ್ನತ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವುದರ ಹಿಂದೆ ಇಬ್ರಾಹಿಂ ಸಾಹೇಬರ ಶ್ರಮಿವಿದೆ ಎಂದರು.
ಅಲ್ಪ ಸಂಖ್ಯಾತರಲ್ಲಿ ಅತ್ಯಧಿಕ ಜನಸಂಖ್ಯೆಯಿದ್ದರೂ ನದಾಫ್ ಪಿಂಜಾರ ಸಮುದಾಯದ ಜನ ಅತ್ಯಂತ ಹಿಂದುಳಿದಿದೆ ಎಂದು ಪರಿಗಣಿಸಲ್ಪಟ್ಟಿದೆ. ದೇಶದ ಉದ್ದಗಲಕ್ಕೂ ನದಾಫ್, ಪಿಂಜಾರ, ಪಿಂಜಾರಿ,ದೊದೆಕೊಲ, ಲದಾಫ್ ಎಂದು ವಿವಿಧ ಹೆಸರುಗಳಲ್ಲಿ ಕರೆಯಲ್ಪಡುವ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯಬೇಕಿದೆ ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ಕಾರ್ಯಪ್ರವೃತ್ತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ರಾಜ್ಯ ಉಪಾಧ್ಯಕ್ಷ ಎಫ್ ಡಿ ನದಾಫ್ ನೆರವೆರಿಸಿದರು.
ಬೆಳಗಾವಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿ ಎ ಕೆ ನದಾಫ್ ಸರಕಾರದಿಂದ ಅನುದಾನದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯ ಮೇಲೆ ಸಮಾಜದ ಮುಖಂಡರಾದ ರೀಯಾಜ ನಾಗ್ತೆ, ಮುದಾಸೀರ ನದಾಫ್, ಆರ್ ವೈ ನದಾಫ್, ಬೆಳಗಾವಿ ಯೂಥ್ ಘಟಕದ ಅಧ್ಯಕ್ಷ ರಸುಲಸಾಬ ನದಾಫ್, ಗೋಕಾಕ ತಾಲೂಕಾಧ್ಯಕ್ಷ ಮೀರಾಸಾಬ ನದಾಫ್, ಮುಸ್ತಾಕ ನದಾಫ್, ದಸ್ತಗೀರಸಾಬ ನದಾಫ್, ಅಸ್ಲಂ ನದಾಫ್, ಜಾಫರ ನದಾಫ್, ಶಾನೂರ ನದಾಫ್, ಇಮ್ರಾನ ನದಾಫ್, ಅಪ್ಪಾಲಾಲ ನದಾಫ, ಸೇರಿದಂತೆ ಇತರರು ಇದ್ದರು.

Related posts: