ಗೋಕಾಕ:ರಮೇಶ ಜಾರಕಿಹೊಳಿ ನನ್ನ ಹಳೆಯ ಸ್ನೇಹಿತ : ಸಚಿವ ಲಕ್ಷ್ಮಣ ಸವದಿ

ರಮೇಶ ಜಾರಕಿಹೊಳಿ ನನ್ನ ಹಳೆಯ ಸ್ನೇಹಿತ : ಸಚಿವ ಲಕ್ಷ್ಮಣ ಸವದಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 22 :
ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ನಾನು 25 ವರ್ಷಗಳಿಂದ ಸ್ನೇಹಿತರು ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು
ಗುರುವಾರದಂದು ನಗರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು .
ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸ ವಿಟ್ಟು ಸಚಿವ ಸ್ಥಾನ ನೀಡಿದ್ದಾರೆ ಸಚಿವ ಸ್ಥಾನ ನಾನು ಬಯಸದೆ ಬಂದ ಭಾಗ್ಯ ಪಕ್ಷದ ವರಿಷ್ಠರು ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು.
ಶಾಸಕ ಹಿರಿಯ ಮುಖಂಡ ಉಮೇಶ ಕತ್ತಿ ಅವರು ಸಹ ನನ್ನ ಒಳ್ಳೆಯ ಸ್ನೇಹಿತರಾಗಿದ್ದು, ಅವರ ಬಗ್ಗೆ ಪಕ್ಷದ ಹೈಕಮಾಂಡನವರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೋಳುತ್ತಾರೆ ಎಂದು ಸಚಿವ ಸವದಿ ಹೇಳಿದರು