RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ: ಜಲಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರು ಯಾವುದೇ ಕಾರಣ ಹೆದರುವ ಹಾಗೂ ಗೊಂದಲಕ್ಕೆ ಒಳಗಾಗಬಾರದು : ಮಾಜಿ ಸಚಿವ ರಮೇಶ

ಗೋಕಾಕ: ಜಲಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರು ಯಾವುದೇ ಕಾರಣ ಹೆದರುವ ಹಾಗೂ ಗೊಂದಲಕ್ಕೆ ಒಳಗಾಗಬಾರದು : ಮಾಜಿ ಸಚಿವ ರಮೇಶ 

ಜಲಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರು ಯಾವುದೇ ಕಾರಣ ಹೆದರುವ ಹಾಗೂ ಗೊಂದಲಕ್ಕೆ ಒಳಗಾಗಬಾರದು : ಮಾಜಿ ಸಚಿವ ರಮೇಶ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 15 :

 

 

ಬೀಕರ ಜಲಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರು ಯಾವುದೇ ಕಾರಣ ಹೆದರುವ ಹಾಗೂ ಗೊಂದಲಕ್ಕೆ ಒಳಗಾಗಬಾರದೆಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಗುರುವಾರದಂದು ನಗರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನುದ್ದೇಶಿಸಿ ಮಾತನಾಡಿದ ಅವರು ಸರ್ಕಾರ ಮನೆ ಕಳೆದುಕೊಂಡವರಿಗೆ 5ಲಕ್ಷ ಹಾಗೂ ತಾತ್ಕಾಲಿಕ ಪರಿಹಾರಧನವಾಗಿ 10 ಸಾವಿರ ರೂಗಳನ್ನು ನೀಡುತ್ತಿದ್ದು ಅದಕ್ಕಾಗಿ ಈಗ ಸದ್ಯ ಕಂದಾಯ ಇಲಾಖೆ ಮತ್ತು ನಗರ ಸಭೆಯ ಅಧಿಕಾರಿಗಳು ಸರ್ವೆ ಕಾರ್ಯವನ್ನು ನಡೆಸುತ್ತಿದ್ದು ಶೀಘ್ರದಲ್ಲಿಯೇ ಪರಿಹಾರ ಚೆಕ್‍ಗಳು ತಮ್ಮ ಕೈ ಸೇರಲಿವೆ ಎಂದು ತಿಳಿಸಿದರು.
ಮನೆ ಮಾಲಿಕರೊಂದಿಗೆ ಬಾಡಿಗೆದಾರರಿಗೆ ಕೂಡಾ ಪರಿಗಣಿಸಿ ಪರಿಹಾರಧನವನ್ನು ನೀಡಲಾಗುವುದು, ಸಂತ್ರಸ್ತರನ್ನು ಗುರುತಿಸುವ ಕಾರ್ಯದಲ್ಲಿ ಅಧಿಕಾರಿಗಳೊಂದಿಗೆ ನಗರಸಭೆ ಸದಸ್ಯರು ಸಹಕರಿಸಬೇಕು. ಸ್ಥಳಾವಕಾಶ ಇಲ್ಲದೆ ಇರುವ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಶೆಡ್ಡಗಳನ್ನು ನಿರ್ಮಿಸಿ ಅವರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು ಸಂತ್ರಸ್ತರು ಧೈರ್ಯದಿಂದ ಇರಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಹೇಳಿದರು.
ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ನಗರ ಸಭೆ ಸದಸ್ಯರಾದ ಎಸ್.ಎ.ಕೋತವಾಲ, ಅಬ್ಬಾಸ ದೇಸಾಯಿ, ಸಿದ್ದಪ್ಪ ಹುಚ್ಚರಾಯಪ್ಪಗೋಳ, ಕುತುಬುದಿನ್ ಗೋಕಾಕ, ಪ್ರಕಾಶ ಮುರಾರಿ, ಬಸವರಾಜ ಆರೆನ್ನವರ, ಶ್ರೀಶೈಲ ಯಕ್ಕುಂಡಿ, ಯುಸುಪ ಅಂಕಲಗಿ, ಜಯಾನಂದ ಹುಣಶ್ಯಾಳ, ಹರೀಶ ಬೂದಿಹಾಳ ಮುಖಂಡರಾದ ಜ್ಯೋತಿಭಾ ಸುಭಂಜಿ, ವಿಶ್ವನಾಥ ಬಿಳ್ಳೂರ, ಶಿವಾನಂದ ಹತ್ತಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಬಸವರಾಜ ಮಾಳಗಿ, ಅಪ್ಘಲ್ ಖತೀಬ, ಬಾಬು ಶೇಖಬಡೆ, ದಾದಪೀರ ಶಭಾಶಖಾನ, ಅಬ್ದುಲ್‍ಸತ್ತಾರ ಶಭಾಶಖಾನ, ಡಾ|| ಅಬ್ದುಲ್‍ವಹಾಬ ಜಮಾದಾರ ಸೇರಿದಂತೆ ಅನೇಕರು ಇದ್ದರು.

Related posts: