ಗೋಕಾಕ:ಜಲಪ್ರಳಯ ಹಿನ್ನೆಲೆ : ಎನ್‍ಡಿಆರ್ ಎಫ್ ತಂಡ ಕಾರ್ಯಚರಣೆಯಿಂದ ಸುಮಾರು 100 ಕ್ಕೂ ಸಂತ್ರಸ್ತರ ಸುರಕ್ಷಿತ ರಕ್ಷಣೆ

ಸಂತ್ರಸ್ತರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತವಾಗಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬಿಟ್ಟಿರುವದು
ಜಲಪ್ರಳಯ ಹಿನ್ನೆಲೆ : ಎನ್‍ಡಿಆರ್ ಎಫ್ ತಂಡ ಕಾರ್ಯಚರಣೆಯಿಂದ ಸುಮಾರು 100 ಕ್ಕೂ ಸಂತ್ರಸ್ತರ ಸುರಕ್ಷಿತ ರಕ್ಷಣೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 8 :
ಪ್ರವಾಹ ಸಿಲುಕಿದ್ದ ಮೂಡಲಗಿ ಹಾಗೂ ಗೋಕಾಕ ತಾಲೂಕಿನ ಸಂತ್ರಸ್ಥರನ್ನು ತಾಲೂಕಾಡಳಿತದ ನೇತ್ರತ್ವದಲ್ಲಿ ಎನ್‍ಡಿಆರ್‍ಎಫ್ ತಂಡ ಹೆಲಿಕಾಪ್ಟರ್ ಹಾಗೂ ಯಾಂತ್ರಿಕೃತ ಬೋಟಗಳನ್ನು ಬಳಿಸಿ ಪ್ರವಾಹದಲ್ಲಿ ಸಿಲುಕಿದ್ದ ಹುಣಶ್ಯಾಳ ಪಿ.ವಾಯ್-60, ಅಂಕತಂಗೇರಹಾಳ-30, ಸುಣಧೋಳಿ-2, ಉದಗಟ್ಟಿ-16 ಜನರನ್ನು ರಕ್ಷಿಸಿದ್ದು ಅದರಲ್ಲಿಯ ಉದಗಟ್ಟಿ ಗ್ರಾಮದ 16 ಜನರನ್ನು ಹೆಲಿಕಾಪ್ಟರ್ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಾಗಿಸಿ ಅಲ್ಲಿಂದ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸಿ ಶಿವಾನಂದ ಭಜಂತ್ರಿ ಅವರು ಪತ್ರಿಕೆ ತಿಳಿಸಿದ್ದಾರೆ.