RNI NO. KARKAN/2006/27779|Saturday, July 12, 2025
You are here: Home » breaking news » ಗೋಕಾಕ:ವಿದ್ಯುತ್ ಕಂಬ್ ಬಿದ್ದು ಪಾದಾಚಾರಿಗೆ ಗಾಯ : ಗೋಕಾಕದಲ್ಲಿ ಘಟನೆ

ಗೋಕಾಕ:ವಿದ್ಯುತ್ ಕಂಬ್ ಬಿದ್ದು ಪಾದಾಚಾರಿಗೆ ಗಾಯ : ಗೋಕಾಕದಲ್ಲಿ ಘಟನೆ 

ವಿದ್ಯುತ್ ಕಂಬ್ ಬಿದ್ದು ಪಾದಾಚಾರಿಗೆ ಗಾಯ : ಗೋಕಾಕದಲ್ಲಿ ಘಟನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 23 :
ನಗರದಲ್ಲಿ ರಸ್ತೆ ಅಗಲೀಕರಣ ಮತ್ತು ಹೊಸ ವಿದ್ಯುತ್ ಕಂಬಗಳು ನಿಲ್ಲಿಸುವ ಕಾರ್ಯ ಭರದಿಂದ ನಡೆಯುತ್ತಿರುವ ಪರಿಣಾಮ ಪಾದಾಚಾರಿಗಳು ಮತ್ತು ವಾಹನ ಸವಾರರು ಸಾಕಷ್ಟು ತೊಂದರೆಯನ್ನು ಪಡುತ್ತಿರುವ ಸಂದರ್ಭದಲ್ಲಿಯೇ ರವಿವಾರಂದು ಮುಂಜಾನೆ ನಗರದ ಅಜಂತಾ ಕೂಟದಲ್ಲಿ ನಿಲ್ಲಿಸಲಾಗಿದ್ಜ ವಿದ್ಯುತ್ ಕಂಬವೊಂದು ಪಾದಾಚಾರಿಯ ಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡು , ಮಹಿಳೆಯೋಬ್ಬರಿಗೆ ಗಂಭೀರ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ .

ಈಗಲಾದರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ನಗರದಲ್ಲಿ ರಸ್ತೆ ಅಗಲೀಕರಣ ಮತ್ತು ವಿದ್ಯುತ್ ಕಂಬಗಳನ್ನು ನಿಲ್ಲಿಸುವ ಸಮಯದಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಪಾದಾಚಾರಿಗಳ ಮತ್ತು ವಾಹನ ಸವಾರರ ಹಿತವನ್ನು ಕಾಪಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Related posts: