ಗೋಕಾಕ:ಶಿವು ಉಪ್ಪಾರ ಅನುಮಾನಾಸ್ಪದ ಸಾವು ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ

ಶಿವು ಉಪ್ಪಾರ ಅನುಮಾನಾಸ್ಪದ ಸಾವು ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 3 :
ಹಿಂದು ಸಂಘಟನೆ ಕಾರ್ಯಕರ್ತ ಹಾಗೂ ಗೋರಕ್ಷಕ ಶಿವು ಉಪ್ಪಾರ ಅವರ ಅನುಮಾನಾಸ್ಪದ ಸಾವುನ್ನು ಖಂಡಿಸಿ ಇಲ್ಲಿಯ ಹಿಂದು ಜಾಗರಣಾ ವೇದಿಕೆಯವರು ಪ್ರತಿಭಟನೆ ನಡೆಸಿದರು.
ಸೋಮವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲದಾರ ಕಚೇರಿಗೆ ತೆರಳಿ ಈ ಪ್ರಕರಣವನ್ನು ಸಿಬಿಐ ಅಥವಾ ಎನ್‍ಆಯ್‍ಎಗೆ ವಹಿಸುವಂತೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ವ್ಯಾಪಕವಾಗಿ ಸಂವಿಧಾನದ ಪರಿಧಿಯನ್ನು ಮೀರಿ ಸಮಾಜದ ಸ್ವಾಸ್ಥ ಕದಡುವಂತಹ ಹಾಗೂ ಭಯ ಹುಟ್ಟಿಸುವಂತಹ ಕೃತ್ಯಗಳು ನಡೆಯುತ್ತಿವೆ. ಸಂವಿಧಾನದ 48ನೇ ಕಲಂನಲ್ಲಿ ನಮೋಧಿಸಿರುವ ಗೋ ಹತ್ಯಾ ನಿಷೇಧ ಕಾಯ್ದೆಯನ್ನು ಗಾಳಿ ತೂರಿ ಕೆಲ ಮತಾಂಧ ಶಕ್ತಿಗಳು ಹಿಂದು ಧರ್ಮದ ಧಾರ್ಮಿಕ ನಂಬಿಕೆಗಳಿಗೆ ಕೊಡಲಿ ಪೆಟ್ಟು ಕೊಡುತ್ತಿದ್ದಾರೆ. ಗೋರಕ್ಷಕ ಶಿವು ಉಪ್ಪಾರನ ಸಾವು ಸಂಶಯಾಸ್ಪದವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಲು ಈ ಪ್ರಕರಣವನ್ನು ಸಿಬಿಐ ಅಥವಾ ಎನ್‍ಆಯ್‍ಎಗೆ ವಹಿಸುವಂತೆ ಹಿಂದು ಜಾಗರಣಾ ವೇದಿಕೆ ಮನವಿಯಲ್ಲಿ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಯೋಜಕ ಸಮರ್ಥ ಖಾಸನೀಸ್, ಮುಖಂಡರಾದ ಅಜೀತ ವಾಕುಡೆ, ರಾಮಚಂದ್ರ ಕಾಕಡೆ, ಕಿರಣ ಡಮಾಮಗರ, ವಿಷ್ಣು ಲಾತೂರ, ಶಂಕರ ಧರೆನ್ನವರ, ಪ್ರವೀಣ ಗೋಸಬಾಳ, ಹಣಮಂತ ಯರಗಟ್ಟಿ, ಈರಣ್ಣ, ಜ್ಯೋತಿಭಾ, ವಿಶಾಲ ಸೇರಿದಂತೆ ಅನೇಕರು ಇದ್ದರು.