ಘಟಪ್ರಭಾ:ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ ಅರಿವು, ರಾಷ್ಟ್ರೀಯ ತಂಬಾಕು ನಿಯಂತ್ರಣ , ಮಲೇರಿಯಾ ಮಾಸಾಚರಣೆ ಶಿಬಿರ

ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ ಅರಿವು, ರಾಷ್ಟ್ರೀಯ ತಂಬಾಕು ನಿಯಂತ್ರಣ , ಮಲೇರಿಯಾ ಮಾಸಾಚರಣೆ ಶಿಬಿರ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜೂ 1 :
ತಾಲೂಕಾ ಆರೋಗ್ಯಾಧಿಕಾರಿಗಳು ಗೋಕಾಕ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿಂಧಿಕುರಬೇಟ, ಪಟ್ಟಣ ಪಂಚಾಯತಿ ಮಲ್ಲಾಪೂರ ಪಿ.ಜಿ ಮತ್ತು ಗ್ರಾಮದ ವಿವದ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅತಿಸಾರಭೇದಿ ನಿಯಂತ್ರಣ ಪಾಕ್ಷಿಕ ಅರಿವು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ಮಲೇರಿಯಾ ಮಾಸಾಚರಣೆ ಶಿಬಿರವನ್ನು ಸ್ಥಳೀಯ ಪಟ್ಟಣದ ಅಂಭಾಭವಾನಿ ಗುಡಿ ಆವರಣದಲ್ಲಿ ಶನಿವಾರದಂದು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಪಟ್ಟಣ ಪಂಚಾಯತಿ ಸದಸ್ಯರಾದ ಸಲೀಮ ಕಬ್ಬೂರ ಜೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ ಸಾರ್ವಜನಿಕರು ತಮ್ಮ ಮನೆಗಳ ಆವರಣವನ್ನು ಸ್ವಚ್ಛವಾಗಿಟ್ಟು ರೋಗಗಳು ಬಾರದಂತೆ ಜಾಗ್ರತೆ ವಹಿಸಬೇಕು. ಮಲೇರಿಯಾ, ಡೆಂಗ್ಯುಗಳಂತಹ ರೋಗಗಳಿಗಾಗಿ
ಪಟ್ಟಣ ಪಂಚಾಯತಿಯವರು ನೀಡುವ ಸೂಚನೆಗಳನ್ನು ಪಾಲಿಸಬೇಕು ಎಂದು ಹೇಳಿದರು.
ಸಾಂಕ್ರಾಮಿಕ ರೋಗ ತಪಾಸಣಾ ಶಿಬಿರ ನಡೆಸಲಾಯಿತು. ಹಿರಿಯ ಆರೋಗ್ಯ ನಿರಿಕ್ಷಕರಾದ ಎಸ್.ಎಂ. ಅಂಗಡಿ ಮಾತನಾಡಿ ತಮ್ಮ ಮನೆಗಳಿಲ್ಲಿನ ನೀರನ್ನು ಎಂಟು ದಿನಕೊಮ್ಮೆ ನೀರನ್ನು ತಾಜಾ ನೀರನ್ನು ತುಂಬಿಕೊಳ್ಳಬೇಕು. ಹೆಚ್ಚು ದಿನ ಇಟ್ಟರೆ ನೀರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆÉ. ಮಲೇರಿಯಾ ಮಾಸಾಚರಣೆಯ ಉದ್ದೇಶ ಸೊಳ್ಳೆಗಳನ್ನು ನಿಯಂತ್ರಣ ಮಾಡಿ ರೋಗಗಳನ್ನು ತಡೆಗಟ್ಟುವದಾಗಿದೆ ಎಂದರು.
ವೈದ್ಯಾಧಿಕಾರಿಗಳಾದ ಡಾ| ಶ್ರೀದೇವಿ ಪೂಜೇರಿ ಮಾತನಾಡಿ ಸಾಂಕ್ರಾಮಿಕ ರೋಗ ನಿಯಂತ್ರಣ ವಿಭಾಗ ಸಾಂಕ್ರಾಮಿಕ ರೋಗಗಳಾವವು ಅವುಗಳ ನಿಯಂತ್ರಣಕ್ಕೆ ಕ್ರಮ, ತಂಬಾಕಿನಿಂದ ಅಗುವ ದುಷ್ಪರಿಣಾಮಗಳನ್ನು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎಲ್.ನಾಯಿಕ ಇದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸನಗೌಡ ಈಶ್ವರಪ್ಪಗೋಳ ಪ್ರಾಸ್ಥಾವಿಕವಾಗಿ ಮಾತನಾಡಿ. ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ಕುದರಿ ವಂದಿಸಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಇಮ್ರಾನ ಬಟಕುರ್ಕಿ, ಆಶಾ ಕಾರ್ಯಕರ್ತರು. ನೂರಾರು ಸಾರ್ವಜನಿಕರು ಇದ್ದರು.
