RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ;ಉಪ್ಪಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ

ಗೋಕಾಕ;ಉಪ್ಪಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ 

ಉಪ್ಪಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೆ 17 :

 
ಮಹರ್ಷಿ ಶ್ರೀ ಭಗೀರಥ ಜಯಂತೋತ್ಸವದ ಅಂಗವಾಗಿ ತಾಲೂಕಿನ ಸಮೀಪದ ಜಾಗನೂರ ಗ್ರಾಮದಲ್ಲಿ ಬುಧವಾರದಂದು ಶ್ರೀ ಭಗೀರಥ ವೃತ್ತ ಹಾಗೂ ಶ್ರೀ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ದಿವ್ಯ ಸಾನಿಧ್ಯ ವಹಿಸಿದ್ದ ಹೊಸದುರ್ಗ ಶ್ರೀ ಭಗೀರಥ ಪೀಠದ ಪೀಠಾಧಿಪತಿ ಡಾ. ಶ್ರೀ ಪುರುಷೊತ್ತಮಾನಂದ ಪುರಿ ಸ್ವಾಮಿಜಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಉಪ್ಪಾರ ಸಮಾಜದ ಭಾಂದವರಿಂದ ಕಳೆದ ಮೂರು ಬಾರಿ ಸತತವಾಗಿ ಶಾಸಕಾನಾಗಿ ಆಯ್ಕೆಯಾಗಿದ್ದು ಅವರ ಅಭಿವೃದ್ಧಿಗೆ ಶ್ರಮಿಸುವದಾಗಿ ಹೇಳಿದರು.
ಡಾ. ಶ್ರೀ ಪುರುಷೊತ್ತಮಾನಂದ ಪುರಿ ಸ್ವಾಮಿಜಿ ಮಾತನಾಡಿ, ಜಾಗನೂರ ಗ್ರಾಮದ ಉಪ್ಪಾರ ಸಮಾಜ ಭಾಂದವರು, ಸರಕಾರದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ಲಾಘಣೀಯ ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಇನ್ನೂ ಹೆಚ್ಚಿನ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿ ಬರಲು ಶ್ರಮಿಸಬೇಕೆಂದು ಕರೆ ನೀಡಿದರು.
ನಂತರ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 80% ಅಂಕ ಪಡೆದ ಉಪ್ಪಾರ ಸಮಾಜದ ಪ್ರತಿಭಾವಂತ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಪವನ ಕತ್ತಿ, ಉಪ್ಪಾರ ಸಮಾಜದ ಯುವ ಘಟಕದ ಅಧ್ಯಕ್ಷ ಭರಮಣ್ಣ ಉಪ್ಪಾರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚೌಕಾಶಿ, ಗೌರವಾಧ್ಯಕ್ಷೆ ಶ್ರೀಮತಿ ತೇಜಶ್ವಿನಿ ನಾಯಿಕವಾಡಿ, ಹನಮಂತ ಕರಿಕಟ್ಟಿ, ಪರಸಪ್ಪ ಹನಮನ್ನವರ, ಭೀಮಪ್ಪ ಹನಜಾನಟ್ಟಿ, ಸುಧಾರಾಣಿ ಮರಾಠೆ, ಪಾಂಡುರಂಗ ಹನಮನ್ನವರ ಸೇರಿದಂತೆ ಉಪ್ಪಾರ ಸಮಾಜದ ಹಿರಿಯರು, ಪ್ರಮುಖರು ಇದ್ದರು.

Related posts: