ಖಾನಾಪುರ:ಪತ್ರಕರ್ತನ ಮೇಲೆ ಪಿ.ಎಸ್.ಆಯ್ ಗುಂಡಾಗಿರಿ: ನಂದಗಡ ಪೊಲೀಸ ಠಾಣೆ ಪಿ.ಎಸ್.ಐ ಆವಟೆನಿಂದ ಕೃತ್ಯ
ಪತ್ರಕರ್ತನ ಮೇಲೆ ಪಿ.ಎಸ್.ಆಯ್ ಗುಂಡಾಗಿರಿ: ನಂದಗಡ ಪೊಲೀಸ ಠಾಣೆ ಪಿ.ಎಸ್.ಐ ಆವಟೆನಿಂದ ಕೃತ್ಯ
ಖಾನಾಪುರ ಜು 10: ಖಾನಾಪೂರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಪಿ.ಎಸ್.ಐ ಯು.ಎಸ್.ಆವಟೆ ನಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ
ಖಾನಾಪುರ ತಾಲೂಕು ಪ್ರಜಾವಣಿ ಪತ್ರಿಕೆಯ ವರದಿಗಾರರಾದ ಪ್ರಸನ್ನ ಕುಲಕರ್ಣಿ ಹಲ್ಲೆಗೊಳಗಾದ ಪತ್ರಕರ್ತ ಬೇಕವಾಡ ಗ್ರಾಮದಲ್ಲಿ ಚುನಾವಣಾ ಸುದ್ದಿಗೆ ತೆರಳಿದಾಗ ವೈಯಕ್ತಿಕ ದ್ವೇಷ ಇಟ್ಟುಕೊಂಡು ಸಾರ್ವಜನಿಕ ಸಮ್ಮುಖದಲ್ಲಿ ಪಿಎಸ್ಐ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ
ಪಿಎಸ್ಐ ಆವಟೆಯವರ ಈ ಅಮಾನವೀಯ ಕೃತ್ಯವನ್ನು ಸ್ಥಳೀಯ ವರದಿಗಾರರು ಮತ್ತು ಕನ್ನಪರ ಸಂಘಟನೆಯ ಮುಖಂಡರು ಖಂಡಿಸಿದ್ದಾರೆ
ಪದೇ ಪದೇ ಒಂದಿಲ್ಲೊಂದು ನೆಪವೊಡ್ಡಿ ಈ ರೀತಿ ಪತ್ರಕರ್ತರ ಮೇಲೆ ನಿರಂತರ ಹಲ್ಲೆ ನಡೆಯುತ್ತಲೃ ಇವೆ ಹಿತಂಹ ಪ್ರಕರಣಗಳು ಮರುಕಳಿಸದಂತೆ ಸರಕಾರ ಸೂಕ್ತ ಕಾನೂನು ಕ್ರಮ ಕೈಗೋಳಬೇಕಾಗಿದೆ.