ಘಟಪ್ರಭಾ:ಮತದಾರರ ಜಾಗೃತಿ : ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಮತದಾರರ ಜಾಗೃತಿ : ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 11:
ಸಮೀಪದ ಮಾಲದಿನ್ನಿ ಗ್ರಾಮ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಲೋಕಸಭಾ ಚುನಾವಣೆ ನಿಮಿತ್ಯ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ನಿಮಿತ್ಯ ಗ್ರಾಮಸ್ಥರಲ್ಲಿ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಓಟ ಫಾರ್ ಇಂಡಿಯಾ, ಭಾರತ ಚುನಾವಣಾ ಆಯೋಗ, ಕಡ್ಡಾಯ ಮತದಾನ, ಜೈ ಕರ್ನಾಟಕ ಹೋಗೆ ವಿವಿಧ ಬಗೆಯ ಬರಹಗಳನ್ನು ಜನರನ್ನು ಆಕರ್ಷಿಸಿತು. ಅಲ್ಲದೇ ಆಟೋಟ ಸ್ಪರ್ಧೆ,ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ನಸರೀನ ಕೊಣ್ಣೂರ, ಪಿಡಿಓ ಸುನೀಲ ನಾಯಕ, ಗುಮಾಸ್ತ ಮಡ್ಡೆಪ್ಪ ಭಜಂತ್ರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮಸ್ಥರು ಇದ್ದರು
.