RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ಶನಿವಾರದಂದು ಕೌಜಲಗಿ ಬಸವೇಶ್ವರ ಜಾತ್ರೆ

ಗೋಕಾಕ:ಶನಿವಾರದಂದು ಕೌಜಲಗಿ ಬಸವೇಶ್ವರ ಜಾತ್ರೆ 

ಶನಿವಾರದಂದು ಕೌಜಲಗಿ ಬಸವೇಶ್ವರ ಜಾತ್ರೆ

 
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಏ 4 :

 

ಸಮೀಪದ ಕೌಜಲಗಿ ಪಟ್ಟಣದ ಶ್ರೀ ಬಸವೇಶ್ವರ ಜಾತ್ರೆಯು ಪ್ರತಿವರ್ಷದಂತೆ ಈ ವರ್ಷವೂ ಇದೇ ಶನಿವಾರ 6 ರಿಂದ 10 ರವರೆಗೆ ಜರುಗಲಿದೆ.
ಏ.6 ರಂದು ಜರುಗುವ ರಥೋತ್ಸವದ ತಯಾರಿ ಅತ್ಯಂತ ಬರದಿಂದ ಸಾಗುತ್ತಿದ್ದು, ಇಂದು ಸ್ಥಳೀಯ ವಿಶ್ವಕರ್ಮ ಕುಶಲಕರ್ಮಿಗಳು ರಥವನ್ನು ಜೋಡಿಸಿ, ಅದಕ್ಕೆ ಸುಂದರವಾಗಿ ಬಣ್ಣ ಬಳಿದು ಅಲಂಕರಿಸುವ ಕಾರ್ಯಗಳನ್ನು ನಿರ್ವಹಿಸಿದರು. ರಥೋತ್ಸವ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಇಂದು ಗುರುವಾರ ರಥದ ಎಲ್ಲ ಕೆಲಸ ಕಾರ್ಯಗಳನ್ನು ಕುಶಲಕರ್ಮಿಗಳು ಶ್ರದ್ಧೆ-ಭಕ್ತಿಯಿಂದ ಮುಕ್ತಾಯಗೊಳಿಸಿದರು.
ಶನಿವಾರದಂದು ಮುಂಜಾನೆ 9 ಗಂಟೆಗೆ ಶ್ರೀ ಬಸವೇಶ್ವರ ಕರ್ತೃ ಗದ್ದುಗೆಗೆ ಅಭಿಷೇಕ, ಗೋವು ಪೂಜೆ ಹಾಗೂ ಕಳಸಾರೋಹಣ ನೆರವೇರುವುದು. ಅಂದು ಸಾಯಂಕಾಲ 5 ಗಂಟೆಗೆ ಸಕಲ ವಾದ್ಯಮೇಳಗಳೊಂದಿಗೆ ಶ್ರೀ ಚಂದ್ರಯ್ಯ ನೀಲಕಂಠಯ್ಯ ಹಿರೇಮಠ ಅವರ ನೇತೃತ್ವದಲ್ಲಿ ರಥೋತ್ಸವವು ಜರುಗುತ್ತದೆ. ರಥೋತ್ಸವ ನಿಮಿತ್ತ ರಾತ್ರಿ 10 ಗಂಟೆಗೆ ಶ್ರೀ ಮರುಳಸಿದ್ಧೇಶ್ವರ ಭಜನಾ ಮೇಳದಿಂದ ಭಜನಾ ಕಾರ್ಯಕ್ರಮಗಳು ಜರುಗುವವು.
ರವಿವಾರ ಏ.7 ರಂದು ಮುಂಜಾನೆ 9 ಗಂಟೆಗೆ ರಂಗೋಲಿ ಸ್ಪರ್ಧೆ, ಏ.8 ರಂದು ಮುಂಜಾನೆ 10 ಗಂಟೆಗೆ ಸ್ಲೋ ಸೈಕಲ್ ಮೋಟರ್ ಸ್ಪರ್ಧೆ, ಏ.10 ರಂದು ರಾತ್ರಿ 7 ಗಂಟೆಗೆ ರಥದ ಕಳಸ ಅವರೋಹಣ ಕಾರ್ಯಕ್ರಮ ಜರುಗುವುದು. 5 ದಿನಗಳ ಕಾಲ ನಿರಂತರ ಅನ್ನಸಂತರ್ಪಣೆಯನ್ನು ಅನ್ನದಾನಿ ಚಂದ್ರಕಾಂತ ಕೃಷ್ಣಾಜಿ ಕಟಾವಕರ ನೀಡಲಿದ್ದಾರೆ ಎಂದು ಶ್ರೀ ಬಸವೇಶ್ವರ ಜಾತ್ರಾ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದೆ.

Related posts: