RNI NO. KARKAN/2006/27779|Sunday, December 6, 2020
You are here: Home » breaking news » ಗೋಕಾಕ:ಯುವಕರು ನವೆಂಬರ್ 1ರ ಹುಡುಗರಾಗದೇ ನಂಬರ 1 ಹುಡುಗರಾಗಬೇಕು : ಶಕೀಲ ಜಕಾತಿ

ಗೋಕಾಕ:ಯುವಕರು ನವೆಂಬರ್ 1ರ ಹುಡುಗರಾಗದೇ ನಂಬರ 1 ಹುಡುಗರಾಗಬೇಕು : ಶಕೀಲ ಜಕಾತಿ 

ಕರವೇ ಯುವ ಘಟಕವನ್ನು ಉದ್ಘಾಟಿಸುತ್ತಿರುವ ಯುವ ಸಾಹಿತಿ ಜಯಾನಂದ ಮಾದರ ಹಾಗೂ ಗಣ್ಯರು

ಯುವಕರು ನವೆಂಬರ್ 1ರ ಹುಡುಗರಾಗದೇ ನಂಬರ 1 ಹುಡುಗರಾಗಬೇಕು : ಶಕೀಲ ಜಕಾತಿ

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ.12 :

 

ಯುವಕರು ನವೆಂಬರ್ 1ರ ಹುಡುಗರಾಗದೇ ನಂಬರ 1 ಹುಡುಗರಾಗಬೇಕು ಎಂದು ಗೋಕಾಕ ಉಪಕಾರಾಗೃಹ ಮುಖ್ಯ ಪೇದೆ ಶಕೀಲ ಜಕಾತಿ ಹೇಳಿದರು.
ಸೋಮವಾರದಂದು ನಗರದ ಕಾಡಸಿದ್ಧೇಶ್ವರ ಮಠದ ಸಬಾಭವನದಲ್ಲಿ ಕರವೇ ತಾಲೂಕಾ ಘಟಕ ಹಮ್ಮಿಕೊಂಡಿದ್ದ ಕರವೇ ತಾಲೂಕಾ ಯುವ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಸುಮಾರು ಎರಡು ಸಾವಿರ ವರ್ಷಗಳ ಹೆಚ್ಚಿನ ಇತಿಹಾಸವುಳ್ಳ ಕನ್ನಡ ಭಾಷೆ ಇಂದು ನಶಿಸಿ ಹೋಗುವ ಆತಂಕವನ್ನು ಎದುರಿಸುತ್ತಿರುವುದು ಖೇದಕರ. ಕನ್ನಡ ಭಾಷೆ ಉಳಿಸಿ ಬೆಳೆಸಲು ಟಿ. ಎ. ನಾರಾಯಣಗೌಡರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಕರವೇ ಯುವ ಘಟಕಗಳು ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ವಿಷಯ. ಹೀಗೆ ಯುವ ಘಟಕದಲ್ಲಿ ಅವಕಾಶ ಪಡೆದ ಯುವಕರು ಕನ್ನಡ ಭಾಷೆಗೆ ಧಕ್ಕೆ ಬಂದಾಗ ಮುಂಚೂಣಿಯಲ್ಲಿ ನಿಂತು ಹೋರಾಡಿ ಕನ್ನಡವನ್ನು ಉಳಿಸುವುದರ ಜೊತೆಗೆ ಭಾಷೆಯನ್ನು ಅಭಿಮಾನದಿಂದ ಬೆಳೆಸುವ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ನಂಬರ 1 ಹುಡುಗರಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಬೆಳಗಾವಿ ಜಿಲ್ಲೆಯ ಗಡಿ ಭಾಗಗಳಲ್ಲಿ ನಿರಂತರವಾಗಿ ಕನ್ನಡದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಕನ್ನಡವನ್ನು ಈ ಭಾಗದಲ್ಲಿ ಗಟ್ಟಿ ಗೊಳಿಸುವ ನಿಟ್ಟಿನಲ್ಲಿ ಬರುವ ಕಸಾಪ ಚುನಾವಣೆಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಫರ್ದಿಸಲಾಗುವುದು. ಜಿಲ್ಲೆಯ ಎಲ್ಲ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿಕೊಂಡು ಕನ್ನಡದ ತೇರನ್ನು ಎಳೆಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಖಾನಪ್ಪನವರ ಹೇಳಿದರು.
ಕಾರ್ಯಕ್ರಮವನ್ನು ಯುವ ಸಾಹಿತಿ ಜಯಾನಂದ ಮಾದರ ಸಸಿಗೆ ನೀರೆರುವ ಮೂಲಕ ಉದ್ಘಾಟಿಸಿದರು. ಕರವೇ ಕಾರ್ಯದರ್ಶಿ ಸಾದಿಕ್ ಹಲ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ ಯುವ ಘಟಕದ ಕಾರ್ಯ ವ್ಯಾಪ್ತಿಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಕರವೇ ರಾಜ್ಯ ಘಟಕದಿಂದ ಬಂದ ಕಾರ್ಯಕರ್ತರ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕೃಷ್ಣಾ ಖಾನಪ್ಪನವರ ಕರವೇ ತಾಲೂಕಾ ಪದಾಧಿಕಾರಿಗಳಾದ ದೀಪಕ ಹಂಜಿ, ರೇಹಮಾನ ಮೊಕಾಶಿ, ಹನೀಪಸಾಬ ಸನದಿ, ಬಳೋಬಾಳ ಗ್ರಾ.ಪಂ. ಸದಸ್ಯ ಲಗಮಣ್ಣಾ ಕಳಸನ್ನವರ, ಮಾಜಿ ಗ್ರಾ.ಪಂ. ಅಧ್ಯಕ್ಷ ಶಿವಪುತ್ರ ಚಿಮ್ಮಡ, ಯುವ ಘಟಕ ಅಧ್ಯಕ್ಷ ಮಂಜುನಾಥ ಪ್ರಭುನಟ್ಟಿ, ಮಹಾದೇವ ಮಕ್ಕಳಗೇರಿ, ಶಾನೂರ ದೇಸಾಯಿ, ಮಲ್ಲಪ್ಪ ತಲೆಪ್ಪಗೋಳ, ರಮೇಶ ಕಮತಿ, ಮಲ್ಲು ಸಂಪಗಾರ, ಲಕ್ಷ್ಮಣ ಗೊರಗುದ್ದಿ, ಅಶೋಕ ಬಂಡಿವಡ್ಡರ, ಕೆಂಪಣ್ಣಾ ಕಡಕೋಳ, ಮುಗುಟ ಪೈಲವಾನ, ಬಸು ಗಾಡಿವಡ್ಡರ, ಮುತ್ತೆಪ್ಪಾ ಘೋಡಗೇರಿ, ಅಜೀತ ಮಲ್ಲಾಪೂರೆ, ಲಕ್ಕಪ್ಪಾ ನಂದಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕರವೇ ತಾಲೂಕಾ ಯುವ ಘಟಕದ ಅಧ್ಯಕ್ಷರನ್ನಾಗಿ ಮಂಜುನಾಥ ಪ್ರಭುನಟ್ಟಿ , ಉಪಾಧ್ಯಕ್ಷರಾಗಿ ಮಹೇಂದ್ರ ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಯಲ್ಲಪ್ಪಾ ಧರ್ಮಟ್ಟಿ, ಸಂಚಾಲಕರಾಗಿ ಅಕ್ಷಯ ಪಾಟೀಲ, ಕಾರ್ಯದರ್ಶಿ ಹಣಮಂತ ಅಮ್ಮಣಗಿ, ಖಜಾಂಚಿಯಾಗಿ ಪ್ರದೀಪ ಆಶಿ, ಸಂಚಾಲಕರಾಗಿ ಆನಂದ ಖಾನಪ್ಪನವರ ರವರನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಕರವೇ ಸಾಂಸ್ಕøತಿಕ ಘಟಕದ ಅಧ್ಯಕ್ಷ ಶಿವು ಪೂಜೇರಿ ನಿರೂಪಿಸಿ, ವಂದಿಸಿದರು.

Related posts: