RNI NO. KARKAN/2006/27779|Tuesday, January 13, 2026
You are here: Home » breaking news » ಗೋಕಾಕ:ಕಲಾವಿದ ವೀರನಾಯ್ಕ ನಾಯ್ಕರಗೆ ರಂಗಭೂಮಿ ಕಲಾರತ್ನ ಪ್ರಶಸ್ತಿ

ಗೋಕಾಕ:ಕಲಾವಿದ ವೀರನಾಯ್ಕ ನಾಯ್ಕರಗೆ ರಂಗಭೂಮಿ ಕಲಾರತ್ನ ಪ್ರಶಸ್ತಿ 

ಕಲಾವಿದ ವೀರನಾಯ್ಕ ನಾಯ್ಕರಗೆ ರಂಗಭೂಮಿ ಕಲಾರತ್ನ ಪ್ರಶಸ್ತಿ
ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಪೆ 21 :

 

ಗೋಕಾಕ ತಾಲೂಕಿನ ಮೆಳವಂಕಿ ಗ್ರಾಮದ ಜನಪ್ರೀಯ ಸಂಗೀತ ಬಳಗದವರ ಸಹಕಾರದೊಂದಿಗೆ ಬೆಟಗೇರಿ ಗ್ರಾಮದ ಆನಂದಕಂದ ಕಲಾನಾಟ್ಯ ಬಳಗದವರು ವಿವಿಧ ವಲಯದ ಸಾಧಕರಿಗೆ ಕೂಡಮಾಡುವ ಪ್ರಸಕ್ತ ವರ್ಷದ ರಂಗಭೂಮಿ ಕಲಾರತ್ನ ಪ್ರಶಸ್ತಿಗೆ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕಾರ್ಯಕ್ರಮ ನಿರೂಪಕ, ರಂಗಭೂಮಿ ಕಲಾವಿದ ವೀರನಾಯ್ಕ ನಾಯ್ಕರ ಅವರು ಆಯ್ಕೆಗೊಂಡಿದ್ದಾರೆ.
ಬೆಟಗೇರಿ ಹಾಗೂ ಬಗರನಾಳ ಗ್ರಾಮದ ಮಧ್ಯ ಭಾಗದಲ್ಲಿರುವ ಬಾಕುಬಾಯಿ ದೇವಿಯ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಸನ್ಮಾನ, ಪ್ರಶಸ್ತಿ ವಿತರಣೆ, ಇದೇ ಶುಕ್ರವಾರÀ ಫೆ.22 ರಂದು ನಡೆಯಲಿದೆ ಎಂದು ಪ್ರಶಸ್ತಿ ವಿತರಣೆ ಆಯೋಜಕ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Related posts: