RNI NO. KARKAN/2006/27779|Monday, August 4, 2025
You are here: Home » breaking news » ಘಟಪ್ರಭಾ:ಭಾರತದ ಸೈನಿಕರು ಒಮ್ಮೆ ಪಾಕಿಸ್ಥಾನದ ಮೇಲೆ ತಿರುಗಿ ಬಿದ್ದರೆ ಪಾಕಿಸ್ತಾನವು ಸರ್ವನಾಶವಾಗುತ್ತದೆ : ಸುರೇಶ ಪಾಟೀಲ

ಘಟಪ್ರಭಾ:ಭಾರತದ ಸೈನಿಕರು ಒಮ್ಮೆ ಪಾಕಿಸ್ಥಾನದ ಮೇಲೆ ತಿರುಗಿ ಬಿದ್ದರೆ ಪಾಕಿಸ್ತಾನವು ಸರ್ವನಾಶವಾಗುತ್ತದೆ : ಸುರೇಶ ಪಾಟೀಲ 

ಭಾರತದ ಸೈನಿಕರು ಒಮ್ಮೆ ಪಾಕಿಸ್ಥಾನದ ಮೇಲೆ ತಿರುಗಿ ಬಿದ್ದರೆ ಪಾಕಿಸ್ತಾನವು ಸರ್ವನಾಶವಾಗುತ್ತದೆ : ಸುರೇಶ ಪಾಟೀಲ
ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಫೆ 16 :

ಪಾಕಿಸ್ತಾನವು ಸುಮ್ಮನೆ ಕ್ಯಾತೆ ಮಾಡುತ್ತ ಅನೇಕ ಉಗ್ರ ಸಂಘಟನೆಗಳನ್ನು ಹುಟ್ಟು ಹಾಕಿ ಭಾರತಕ್ಕೆ ಕಳುಹಿಸಿ ಭಾರತವನ್ನು ಹೆದರಿಸಲು ನೋಡುತ್ತಿದೆ ಆದರೆ ಭಾರತದ ಸೈನಿಕರು ಒಮ್ಮೆ ಪಾಕಿಸ್ಥಾನದ ಮೇಲೆ ತಿರುಗಿ ಬಿದ್ದರೆ ಪಾಕಿಸ್ತಾನವು ಸರ್ವನಾಶವಾಗುತ್ತದೆಂದು ಸುರೇಶ ಪಾಟೀಲ ಹೇಳಿದರು.
ಅವರು ಶುಕ್ರವಾರ ಸಂಜೆ ಇಲ್ಲಿಯ ಮೃತ್ಯುಂಜಯ ವೃತ್ತದಲ್ಲಿ ಬಜರಂಗ ದಳ, ಯುವ ಬ್ರಿಗೇಡ್, ರಾಮ ಸೇನಾ, ಆರ್.ಎಸ್.ಎಸ್ ಮತ್ತು ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳಿಂದ ದಿ.14 ರಂದು ಹುತಾತ್ಮರಾದ 44 ಜನ ಭಾರತ ವೀರಯೋಧರ ಹತ್ಯೆಯನ್ನು ಖಂಡಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು. ಭಾರತದವರು ಶಾಂತಿ ಪ್ರಿಯರು ಅದನ್ನು ಪಾಕಿಸ್ತಾನ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.
ಮಲ್ಲಾಪೂರ ಪಿ.ಜಿ ಪಟ್ಟಣದ ವಿಠ್ಠಲ ದೇವಸ್ಥಾನದ ಹತ್ತಿರ ಜಮಾಹಿಸಿದ ನೂರಾರು ಕಾರ್ಯಕರ್ತರು ಮೊಂಬತ್ತಿ ಕೈಯಲ್ಲಿ ಹಿಡಿದು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುತ್ತ ಮೃತ್ಯುಂಜಯ ವೃತ್ತಕ್ಕೆ ಆಗಮಿಸಿ ಸುಮಾರು ಅಧರ್À ಘಂಟೆಯ ವರೆಗೆ ಸಂಕೇಶ್ವರ–ಯರಗಟ್ಟಿ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಲ್ಲಾಪೂರ ಪಿ.ಜಿ ಹಾಗೂ ಸುತ್ತ ಮುತ್ತಲಿನ ಬಜರಂಗ ದಳ, ಯುವ ಬ್ರಿಗೇಡ್, ರಾಮ ಸೇನಾ, ಆರ್.ಎಸ್.ಎಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಬಾಗವಹಿಸಿದ್ದರು.

Related posts: