ಘಟಪ್ರಭಾ:ಬಬಲಾದಿ ಯಾತ್ರಾ ಮಹೋತ್ಸವ ನಿಮಿತ್ಯ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿ
ಬಬಲಾದಿ ಯಾತ್ರಾ ಮಹೋತ್ಸವ ನಿಮಿತ್ಯ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿ
ಘಟಪ್ರಭಾ ಜ 22 : ಸಮೀಪದ ಶಿಂದಿಕುರಬೇಟ ಹಾಗೂ ಅರಭಾಂವಿ ಗ್ರಾಮಗಳ ಮಧ್ಯದಲ್ಲಿರುವ ಶ್ರೀ ಕ್ಷೇತ್ರ ಬಬಲಾದಿ ಮಠದ ಯಾತ್ರಾ ಮಹೋತ್ಸವವು ಪೂಜ್ಯ ಶ್ರೀ ಶಿವಯ್ಯಾ ಮಹಾಸ್ವಾಮಿಜಿಯವರ ನೇತ್ರತ್ವದಲ್ಲಿ ದಿ.23 ರಂದು ಜರುಗಲಿದೆ.
ಮುಂಜಾನೆ ಶ್ರೀ ಶಿವಶಕ್ತಿ ಗದ್ದುಗೆಯ ಅಭಿಷೇಕ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಂದ ಅಂಬಲಿ ಕುಂಭಗಳ ಆಗಮನ, ವಿವಿಧ ಗ್ರಾಮಗಳ ವಾದ್ಯಮೇಳಗಳ ವಾದ್ಯ ಜರುಗುವುದು. ಶ್ರೀಗಳಿಂದ ಮಹಾಪ್ರಸಾದ ಪೂಜೆ ಹಾಗೂ ಆಶೀರ್ವಚನ ನಂತರ ಸಂಜೆ 4 ಗಂಟೆಗೆ ಅಂತರಾಷ್ಟ್ರೀಯ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳು ಜರುಗಲಿವೆ. ಈ ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಅಂತರಾಷ್ಟ್ರೀಯ ಕುಸ್ತಿ ಪಟು ರತ್ನಕುಮಾರ ಮಠಪತಿ ಆಗಮಿಸುವರು. ಸತತ ಮೂರು ವರ್ಷ ಕುಸ್ತಿಯಲ್ಲಿ ವಿಜೇತಗೊಂಡ ಕುಸ್ತಿ ಪಟುವಿಗೆ ಬೆಳ್ಳಿ ಗದೆ ನೀಡಲಾಗುತ್ತದೆ. ರಾತ್ರಿ 10 ಗಂಟೆಗೆ ಮಧುರಖಂಡಿಯ ಶ್ರೀ ಮಲ್ಲಿಕಾರ್ಜುನ ಪ್ರಸಾದಿಕ ನಾಟ್ಯ ಸಂಘದವರಿಂದ ಶ್ರೀ ಹೇಮರೆಡ್ಡಿ ಮಲ್ಲಮ್ಮ ಎಂಬ ಬೈಲಾಟ ಜರುಗಲಿದೆ. ಎಂದು ಯಾತ್ರ ಕಮೀಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.