RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಸಂಪುಟ ವಿಸ್ತರಣೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ : ಮಾಜಿ ಸಚಿವ ಸತೀಶ ಜಾರಕಿಹೊಳಿ

ಗೋಕಾಕ:ಸಂಪುಟ ವಿಸ್ತರಣೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ : ಮಾಜಿ ಸಚಿವ ಸತೀಶ ಜಾರಕಿಹೊಳಿ 

ಸಂಪುಟ ವಿಸ್ತರಣೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ : ಮಾಜಿ ಸಚಿವ ಸತೀಶ ಜಾರಕಿಹೊಳಿ

ಗೋಕಾಕ ಡಿ 16 : ಸಂಪುಟ ವಿಸ್ತರಣೆ ಮಾಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ವೆಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು

ರವಿವಾರದಂದು ನಗರದ ಹೊರವಲಯದಲ್ಲಿ ಡಿ 22 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಮುಸ್ಲಿಂ ಸಮಾಜದ 6 ಜಿಲ್ಲೆಗಳ ಇಜ್ತಮಾ ಕಾರ್ಯಕ್ರಮದ ಪೂರ್ವ ಸಿದ್ದತೆಗಳನ್ನು ವಿಕ್ಷೀಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು .

ಡಿ 22 ರಂದು ನಡೆಸಲು ಉದ್ದೇಶಿಸಿರುವ ಸಂಪುಟ ವಿಸ್ತರಣೆಯಲ್ಲಿ ಯಾರನ್ನು ಸೇರಿಸಬೇಕೆಂದು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ರಾಜ್ಯ ಸರಕಾರ ಭದ್ರವಾಗಿದೆ ಸರಕಾರ ಬದಲಿಸುವ ಪ್ರಶ್ನೆಯಿಲ್ಲಾ ಎರೆಡು ವರ್ಷಗಳ ನಂತರ ನನಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ. ಒಂದು ವೇಳೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನಗೆ ಅವಕಾಶ ನೀಡಿದರೆ ಅದನ್ನು ಸರ್ಮಥವಾಗಿ ನಿಭಾಹಿಸುತ್ತೆನೆ . ಎಲ್ಲ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳು ವಿದ್ದಂತೆ ಕಾಂಗ್ರೆಸ ಪಕ್ಷದಲ್ಲಿಯೂ ಸಹ ಕೆಲವು ಸಮಸ್ಯೆಗಳು ವಿರುವದು ನಿಜ ಹಾಗಂತ ಪಕ್ಷ ಬಿಡುವ ವಿಚಾರವಿಲ್ಲ ಎಂದು ಪರ್ತಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಇಸ್ಲಾಂ ಧರ್ಮ ಶಾಂತಿ ಸಂಕೇತದ ಧರ್ಮದವಾಗಿದ್ದು , ಡಿಸೆಂಬರ್ 22 ರಿಂದ ಮೂರು ದಿನಗಳ ಕಾಲ ಜರಗುವ ಇಜ್ತಮಾದ ಯಶ್ವಸಿಗೆ ಎಲ್ಲರೂ ಸಹಕರಿಸಬೇಕೆಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಮನವಿ ಮಾಡಿ ಇಜ್ತಮಾಕ್ಕೆ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯ ಎಸ್.ಎ.ಕೋತವಾಲ , ಇಲಾಹಿ ಖೈರದಿ , ಹಾಜಿ ಕುತಬುದ್ಧೀನಬಸಾಪೂರ ,ರಿಯಾಜ ಚೌಗಲಾ , ಆರೀಫ ಪೀರಜಾದೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: