ಗೋಕಾಕ:ಗ್ರಾಮದ ಅಭಿವೃದ್ಧಿಗೆ ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕ: ಗೌಡಪ್ಪ ಮಾಳೇದ
ಗ್ರಾಮದ ಅಭಿವೃದ್ಧಿಗೆ ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕ: ಗೌಡಪ್ಪ ಮಾಳೇದ
ಬೆಟಗೇರಿ ನ 28 : ಗ್ರಾಮದ ಅಭಿವೃದ್ಧಿ ಹಿತದೃಷ್ಠಿಯಿಂದ ಗ್ರಾಮ ಪಂಚಾಯ್ತಿ ಸದಸ್ಯರ ಹಾಗೂ ಸ್ಥಳೀಯರ ಸಹಾಯ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗೌಡಪ್ಪ ಮಾಳೇದ ಹೇಳಿದರು.
ಗ್ರಾಮದ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಮಂಗಳವಾರ ನ.27 ರಂದು ನಡೆದ ಕರ ವಸೂಲಿ ಪ್ರಯುಕ್ತ ಇಲ್ಲಿಯ ಮನೆ, ಅಂಗಡಿ, ಮುಂಗಟ್ಟುಗಳಿಗೆ ತೆರಳಿ ಕರ ಪಾವತಿಸಿಕೊಂಡು ಮಾತನಾಡಿದರು.
ಊರಿನ ಗ್ರಾಮಸ್ಥರು ತಮ್ಮ ಮನೆ, ಅಂಗಡಿ, ಮುಗ್ಗಟ್ಟುಗಳ ಹಾಗೂ ಮತ್ತೀತರ ಕರಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿ ಸಿಬ್ಬಂದಿ ಅವರಲ್ಲಿ ಕೊಡಲೇ ಪಾವತಿಸಿಕೊಳ್ಳಬೇಕು ಎಂದು ಗ್ರಾಪಂ ಪಿಡಿಒ ಬಿ.ಎಫ್.ದಳವಾಯಿ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಗ್ರಾಪಂ ಕಾಕ್ರ್ಲ ಸುರೇಶ ಬಾಣಸಿ, ಪರಶುರಾಮ ಇಟಗೌಡ್ರ, ಶಿವಾನಂದ ಐದುಡ್ಡಿ, ಪ್ರಕಾಶ ಹರಿಜನ, ರಾಮಣ್ಣ ದಂಡಿನ ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.