ಗೋಕಾಕ:ಉದ್ದಣ್ಣ ಗೋಡೇರ ಅವರಿಗೆ ರಾಷ್ಟ್ರೀಯ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ
ಉದ್ದಣ್ಣ ಗೋಡೇರ ಅವರಿಗೆ ರಾಷ್ಟ್ರೀಯ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ
ಬೆಟಗೇರಿ ನ 23 : ಗೋವಾ ರಾಜ್ಯ ಮತ್ತು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಸಂಸ್ಥೆಯು ಮಹಾರಾಜ್ಯದ ಕೊಲ್ಲಾಪೂರ ಮಹಾಲಕ್ಷ್ಮೀ ಸಾಂಸ್ಕøತಿಕ ಭವನದಲ್ಲಿ ಇಚೆಗೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮದ ಜಾನಪದ ದಟ್ಟಿ ಕುಣಿತ ಕಲಾವಿದ, ಸಾಹಿತಿ, ಗೋಕಾಕ ಕನ್ನಡ ಜಾನಪದ ಸಂಸ್ಥೆಯ ರಾಜ್ಯಾಧ್ಯಕ್ಷ ಉದ್ದಣ್ಣ ಗೋಡೇರ ಅವರಿಗೆ ರಾಷ್ಟ್ರೀಯ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ.
ಗೋವಾ ಕನ್ನಡ ಮತ್ತು ಸಸ್ಕøತಿ ಇಲಾಖೆ ಸಚಿವ ಗೋವಿಂದ ಗಾವಡೆ, ಗೋವಾ ರಾಜ್ಯ ಮತ್ತು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಸಂಸ್ಥೆಯ ಅಧ್ಯಕ್ಷ ಆರ್.ವಿ.ಕುಲಕರ್ಣಿ, ಎಮ್.ಆರ್.ಕದಮ್, ಅರವಿಂದ ದಿಕ್ಷೀತ, ಶಿವರಾಮ ಪವಾರ, ಬಿ.ಎಮ್.ಪಾಟೀಲ, ಡಾ.ಜೈಶಂಕರ ಯಾದವ, ಅಖಿಲಾ ಪಠಾಣ, ಡಾ.ಬಿ.ಎಸ್.ಸಾಳ್ವೆ, ಲಲಿತಾ ಜೋಗದ, ಸೂರಜ ನಾಯ್ಕ, ಅನಂತ ಚಿಂಚಣಿ ಸೇರಿದಂತೆ ಗೋವಾ ರಾಜ್ಯ ಮತ್ತು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಸಂಸ್ಥೆಯು ಪದಾಧಿಕಾರಿಗಳು, ಸದಸ್ಯರು, ಮತ್ತೀತರರು ಇದ್ದರು.