ಗೋಕಾಕ:ವ್ಯಕ್ತಿತ್ವ ವಿಕಾಸದಿಂದ ಸಮಾಜದ ವಿಕಾಸ ಸಾಧ್ಯ : ಸವಿತಾ ರಮೇಶ
ವ್ಯಕ್ತಿತ್ವ ವಿಕಾಸದಿಂದ ಸಮಾಜದ ವಿಕಾಸ ಸಾಧ್ಯ : ಸವಿತಾ ರಮೇಶ
ಗೋಕಾಕ ಸೆ 16 : ವ್ಯಕ್ತಿತ್ವ ವಿಕಾಸದಿಂದ ಸಮಾಜದ ವಿಕಾಸ ಸಾಧ್ಯವೆಂಬ ತತ್ವದಡಿ ಜೆಸಿಐ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಜೆಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ಸವಿತಾ ರಮೇಶ ಹೇಳಿದರು.
ಶನಿವಾರದಂದು ಸಂಜೆ ಇಲ್ಲಿಯ ವಿವೇಕಾನಂದ ನಗರದಲ್ಲಿಯ ಜೆಸಿಐ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಜೆಸಿಐ ಸಪ್ತಾಹ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ದೇಶದ ಭವಿಷ್ಯ ಮಹಿಳೆಯರ ಕೈಯಲ್ಲಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಅವರಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿ ಉತ್ತಮ ಕನಸ್ಸುಗಳನ್ನು ಮೂಡಿಸಿ ಅವಗಳನ್ನು ಸಾಕಾರಗೊಳಿಸಲು ಶ್ರಮಿಸಬೇಕು. ಶುದ್ಧ ಮನಸ್ಕರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಅಂತವರನ್ನು ರೂಪಿಸಲು ಜೆಸಿಐ ಸಂಸ್ಥೆ ತನ್ನನು ತೊಡಗಿಸಿಕೊಂಡಿದೆ ಎಂದು ಅವರು ಇಲ್ಲಿಯ ಜೆಸಿಐ ಸಂಸ್ಥೆ ಶೈಕ್ಷಣಿಕ ಬೆಳವಣಿಗಾಗಿ ಹಲವಾರು ತರಬೇತಿ ಕಾರ್ಯಕ್ರಮಗಳೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ಸವಿತಾ ರಮೇಶ ಅವರನ್ನು ಇಲ್ಲಿಯ ಜೆಸಿಐ ಸಂಸ್ಥೆಯ ಪರವಾಗಿ ಸತ್ಕರಿಸಿದರು.
ವೇದಿಕೆ ಮೇಲೆ ಜೆಸಿಐ ಸಂಸ್ಥೆಯ ಅಧ್ಯಕ್ಷ ಜಿ.ಆರ್.ನಿಡೋಣಿ, ಕಾರ್ಯದರ್ಶಿ ಕೆಂಪಣ್ಣ ಚಿಂಚಲಿ, ಮಹಿಳಾ ಘಟಕ ಅಧ್ಯಕ್ಷೆ ಸುಧಾ ನಿಡೋಣಿ, ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ, ಕೆಎಲ್‍ಇ ಶಾಲೆಯ ಪ್ರಾಚಾರ್ಯೆ ಅನುಪಾ ಕೌಶಿಕ, ಬಿಸಿಎಮ್ ಹಾಸ್ಟೆಲ್ ನ ಮೇಲ್ವಿಚಾರಕಿ ಪ್ರೀತಿ ಬಂಬರಗಿ, ಸಾಹಿತಿ ಸುಧಾ ಡಂಬಳ, ರೋಟರಿ ರಕ್ತ ಭಂಡಾರದ ಕಾರ್ಯದರ್ಶಿ ಸೋಮಶೇಖರ ಮಗದುಮ್ಮ ಇದ್ದರು.
ಸ್ಪಪ್ನಾ ಮೇಳವಂಕಿ ಸ್ವಾಗತಿಸಿ, ಮೀನಾಕ್ಷಿ ಸವದಿ ನಿರೂಪಿಸಿ, ವಂದಿಸಿದರು.