ಗೋಕಾಕ:ಗೋಕಾಕ-ಶಿಂಗಳಾಪೂರ ಬ್ರೀಜ್ ಕಂ ಬ್ಯಾರೇಜ್‍ಗೆ ಎಸಿ ಶಿವಾನಂದ ಭಜಂತ್ರಿ ಭೇಟಿ
ಗೋಕಾಕ-ಶಿಂಗಳಾಪೂರ ಬ್ರೀಜ್ ಕಂ ಬ್ಯಾರೇಜ್‍ಗೆ ಎಸಿ ಶಿವಾನಂದ ಭಜಂತ್ರಿ ಭೇಟಿ
ಗೋಕಾಕ ಅ 29 : ಗೋಕಾಕ-ಶಿಂಗಳಾಪೂರ ಬ್ರೀಜ್ ಕಂ ಬ್ಯಾರೇಜ್‍ಗೆ ಬುಧವಾರದಂದು ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು ಪ್ರವಾಹದಿಂದ ಬ್ಯಾರೇಜ್‍ಗೆ ಕೊಡುವ ರಸ್ತೆಯು ಹಾನಿಗೆ ಒಳಗಾಗಿದ್ದು ಅದನ್ನು ಪ್ರವಾಹ ನಿಯಂತ್ರಣ ಅನುದಾನದಲ್ಲಿ ತ್ವರಿತವಾಗಿ ದುರಸ್ಥಿ ಕಾರ್ಯ ಮಾಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಜಿ.ಎಸ್.ಮಳಗಿ, ಪೌರಾಯುಕ್ತ ಎಂ.ಎಚ್.ಅತ್ತಾರ, ಚಿಕ್ಕ ನೀರಾವರಿಯ ಸಹಾಯಕ ಅಭಿಯಂತ ಜೈಭೀಮ, ಎಲ್.ಎಚ್.ಭೋವಿ, ಆರ್.ಐ.ನೇಸರಗಿ, ದೇಸಾಯಿ ಇದ್ದರು.