ಗೋಕಾಕ:ಕನಕಶ್ರೀ ವಿವಿಧ ಉದ್ಧೇಶಗಳ ಸೌಹಾರ್ದ ಸಹಕಾರಿ ಸಂಘದಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ
ಕನಕಶ್ರೀ ವಿವಿಧ ಉದ್ಧೇಶಗಳ ಸೌಹಾರ್ದ ಸಹಕಾರಿ ಸಂಘದಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ
ಬೆಟಗೇರಿ ಅ 15 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕನಕಶ್ರೀ ವಿವಿಧ ಉದ್ಧೇಶಗಳ ಸೌಹಾರ್ದ ಸಹಕಾರಿ ಸಂಘದಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು. ಇಲ್ಲಿಯ ಶಾಖೆಯ ಅಧ್ಯಕ್ಷ ಹನುಮಂತ ವಡೇರ ಧ್ವಜಾರೋಹಣ ನೆರವೇರಿಸಿದರು. ಆಡಳಿತ ಮಂಡಳಿ ಸದಸ್ಯರು, ಸಂಘದ ವ್ಯವಸ್ಥಾಪಕ ರಮೇಶ ಹಾಲನ್ನವರ, ಸಿಬ್ಬಂದಿ ವರ್ಗ, ಸಹಕಾರಿಯ ಗ್ರಾಹಕರು, ಇತರರು ಉಪಸ್ಥಿತರಿದ್ದರು.
ಚೈತನ್ಯ ಅರ್ಬನ್ ಸೊಸಾಯಿಟಿ: ಮೂಡಲಗಿಯ ಚೈತನ್ಯ ಅರ್ಬನ್ ಕೊ-ಆಫ್ ಕ್ರೆಡಿಟ್ ಸೊಸಾಯಿಟಿಯ ಬೆಟಗೇರಿ ಗ್ರಾಮದ ಶಾಖೆಯಲ್ಲಿ 72 ನೇ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ಬುಧವಾರದಂದು ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಧ್ವಜಾರೋಹಣ ನೆರವೇರಿಸಿದರು. ಸಣ್ಣಪ್ಪ ಐದುಡ್ಡಿ, ಶಾಖೆಯ ಸಲಹಾ ಸಮಿತಿ ಸದಸ್ಯರು ಶಾಖಾ ವ್ಯವಸ್ಥಾಪಕ ವಿಠಲ ನೇಮಗೌಡರ, ಸಿಬಂ್ಬದಿ ವರ್ಗ, ಚೈತನ್ಯ ಶಾಲೆಯ ಮಕ್ಕಳು, ಗ್ರಾಮಸ್ಥರು, ಇತರರು ಉಪಸ್ಥಿತರಿದ್ದರು.